ಶುಕ್ರವಾರ, ನವೆಂಬರ್ 22, 2019
22 °C

ಕಿರುಕುಳ ಹೇಳಿಕೆ: ಶೆಹ್ಲಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Published:
Updated:
Prajavani

ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಜನಾಂದೋಲನದ ನಾಯಕಿ ಶೆಹ್ಲಾ ರಶೀದ್‌ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ.

‘ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಬಳಿಕ ಸೇನಾ ಪಡೆಗಳು ನಾಗರಿಕರಿಗೆ ಕಿರುಕುಳ ನೀಡುತ್ತಿವೆ. ಕಣಿವೆಯಲ್ಲಿ ಮನೆಗಳಲ್ಲಿ ದಾಂದಲೆ ನಡೆಸುತ್ತಿವೆ’ ಎನ್ನುವ ಅವರ ಟ್ವೀಟ್‌ಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ.

ಭಾರತೀಯ ಸೇನೆಯ ವರ್ಚಸ್ಸಿಗೆ ಕುಂದು ತರುವ ಉದ್ದೇಶದಿಂದ ಸುಳ್ಳು ಸುದ್ದಿ ಗಳನ್ನು ಪ್ರಸಾರ ಮಾಡು ತ್ತಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.

ಪ್ರತಿಕ್ರಿಯಿಸಿ (+)