ಶುಕ್ರವಾರ, ನವೆಂಬರ್ 22, 2019
26 °C
ವಾಣಿಜ್ಯ ಮಳಿಗೆ ನಿರ್ಮಾಣ

ಸಿಎ ನಿವೇಶನದಲ್ಲಿ ಕಾಮಗಾರಿ ನಿರಾತಂಕ!

Published:
Updated:
Prajavani

ಬೆಂಗಳೂರು: ನಾಗರಿಕ ಸೌಲಭ್ಯ (ಸಿ.ಎ) ಅಥವಾ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರುವ ನಿವೇಶನದಲ್ಲಿ ಮಾಜಿ ಮೇಯರ್‌ ವೆಂಕಟೇಶ
ಮೂರ್ತಿ ನಿರಾತಂಕವಾಗಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ. 

ಈ ಕುರಿತು ‘ಪ್ರಜಾವಾಣಿ’ ಶುಕ್ರವಾರ ವರದಿ ಪ್ರಕಟಿಸಿತ್ತು. ನಂತರವೂ, ಈ ಕಾಮಗಾರಿ ಸ್ಥಗಿತಗೊಳಿಸುವ ಅಥವಾ ಯಾವುದೇ ಕ್ರಮ ಜರುಗಿಸಲು ಬಿಡಿಎ ಅಧಿಕಾರಿಗಳು ಮುಂದಾಗಿಲ್ಲ. 

‘ಪದ್ಮನಾಭನಗರದ 18ನೇ ಮುಖ್ಯರಸ್ತೆಯಲ್ಲಿನ ರಾಯಲ್‌ ಮಾರ್ಟ್‌ ಎದುರಿನ ಸಿಎ–8 ನಿವೇಶನದಲ್ಲಿ ವೆಂಕಟೇಶಮೂರ್ತಿ 12 ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ. ಬೇರೆ ಪಕ್ಷದ ಸ್ಥಳೀಯ ಮುಖಂಡರು ಈ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಹಾಗಾಗಿ, ಕಾಮಗಾರಿ ನಿರಾತಂಕವಾಗಿ ಸಾಗಿದೆ’ ಎಂದು ಸ್ಥಳೀಯರೊಬ್ಬರು ದೂರಿದರು.

ಪ್ರತಿಕ್ರಿಯಿಸಿ (+)