ಮಂಗಳವಾರ, ನವೆಂಬರ್ 19, 2019
29 °C

ವಸುಮತಿ ಉಡುಪ ವರ್ಷದ ಲೇಖಕಿ

Published:
Updated:
Prajavani

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ‘ವರ್ಷದ ಲೇಖಕಿ–ಅಂಕಿತ ಪುಸ್ತಕ ಪುರಸ್ಕಾರ’ಕ್ಕೆ ಲೇಖಕಿ ವಸುಮತಿ ಉಡುಪ ಆಯ್ಕೆಯಾಗಿದ್ದಾರೆ. 

ವಸುಮತಿ ಉಡುಪ ಅವರ 21 ಕಥಾ ಸಂಕಲನಗಳು ಈವರೆಗೆ ಪ್ರಕಟವಾಗಿವೆ. ಅಂಕಿತ ಪುಸ್ತಕ ಪ್ರಕಾಶನವು ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿಯನ್ನು ಸ್ಥಾಪಿಸಿದ್ದು, ಈ ಪ್ರಶಸ್ತಿ ₹ 35 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ. 

ಸಂಘವು ಭಾನುವಾರ (ಸೆ.8) ಬೆಳಿಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಕವಿ ಪ್ರೊ. ದೊಡ್ಡರಂಗೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ಪ್ರತಿಕ್ರಿಯಿಸಿ (+)