ಶುಕ್ರವಾರ, ನವೆಂಬರ್ 15, 2019
27 °C

ದಿನೇಶ್ ಕಾರ್ತಿಕ್‌ಗೆ ಶೋಕಾಸ್ ನೋಟಿಸ್

Published:
Updated:
Prajavani

ನವದೆಹಲಿ (ಪಿಟಿಐ): ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಯ ಟ್ರಿಂಬಾಗೊ ನೈಟ್ ರೈಡರ್ಸ್‌ ಫ್ರ್ಯಾಂಚೈಸ್‌ನ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರಿಗೆ ಬಿಸಿಸಿಐ ಶೋಕಾಸ್ ನೋಟಿಸ್ ನೀಡಿದೆ.

ಈ ತಂಡವು ಬಾಲಿವುಡ್ ನಟ ಶಾರೂಕ್ ಖಾನ್ ಅವರ ಮಾಲೀಕತ್ವದ್ದಾಗಿದೆ. ಐಪಿಎಲ್‌ನಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೂ ಶಾರೂಕ್ ಮಾಲೀಕರಾಗಿದ್ಧಾರೆ.  ಕೋಲ್ಕತ್ತ ತಂಡಕ್ಕೆ ದಿನೇಶ್ ನಾಯಕರಾಗಿದ್ಧಾರೆ.

‘ದಿನೇಶ್ ಅವರಿಗೆ ನೋಟಿಸ್ ನೀಡಲಾಗಿದೆ. ಟ್ರಿಂಬಾಗೊ ನೈಟ್‌ ರೈಡರ್ಸ್‌ ಡ್ರೆಸ್ಸಿಂಗ್‌ ರೂಮ್‌ನಲ್ಲಿ ದಿನೇಶ್ ಇದ್ದ ಛಾಯಾಚಿತ್ರಗಳು ನಮಗೆ ಲಭಿಸಿವೆ. ಅದಕ್ಕಾಗಿ ನೋಟಿಸ್ ನೀಡಲಾಗಿದೆ. ತಮ್ಮ ಈ ಲೋಪಕ್ಕೆ ಕೇಂದ್ರ ಗುತ್ತಿಗೆಯಿಂದ ಏಕೆ ತಮ್ಮನ್ನು ಕೈಬಿಡಬಾರದು ಎಂದು ಸಿಇಒ ರಾಹುಲ್ ಜೊಹ್ರಿ ಅವರು ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಬಿಸಿಸಿಐ ದಿನೇಶ್ ಹೊಂದಿದ್ದಾರೆ. ಆದರೆ ಪೂರ್ವಾನುಮತಿ ಇಲ್ಲದೇ ಬೇರೆ ಯಾವುದೇ ಲೀಗ್‌ನಲ್ಲಿ ಅವರು ಭಾಗವಹಿಸುವಂತಿಲ್ಲ. ಕೆರಿಬಿಯನ್ ಲೀಗ್‌ಗೆ ತೆರಳುವ ಮುನ್ನ ಅವರು ಬಿಸಿಸಿಐನಿಂದ ಅನುಮತಿ ಪಡೆದಿರಲಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

 34 ವರ್ಷದ ದಿನೇಶ್ ಅವರು ಈಚೆಗೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡಿದ್ದರು.

ಪ್ರತಿಕ್ರಿಯಿಸಿ (+)