ಬುಧವಾರ, ನವೆಂಬರ್ 13, 2019
18 °C

ಆ್ಯಷಸ್ ಟೆಸ್ಟ್: ಆಸ್ಟ್ರೇಲಿಯಾಕ್ಕೆ ಮತ್ತೆ ಸ್ಮಿತ್ ಆಸರೆ

Published:
Updated:
Prajavani

ಮ್ಯಾಂಚೆಸ್ಟರ್ (ಪಿಟಿಐ): ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿ ಆಸ್ಟ್ರೆಲಿಯಾ ತಂಡಕ್ಕೆ ಶಕ್ತಿ ತುಂಬಿದ್ದ ಸ್ಟೀವನ್ ಸ್ಮಿತ್ ಎರಡನೇ ಇನಿಂಗ್ಸ್‌ನಲ್ಲಿಯೂ ಇಂಗ್ಲೆಂಡ್‌ ಬೌಲರ್‌ಗಳಿಗೆ ತಲೆನೋವಾದರು. 

ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗಳಿಸಿದ್ದ 497 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ 301 ರನ್‌ ಗಳಿಸಿ ಕುಸಿಯಿತು. ಜೋಷ್ ಹೇಜಲ್‌ವುಡ್ ಮತ್ತು ಪ್ಯಾಟ್ ಕಮಿನ್ಸ್‌ ಅವರು ತಲಾ ಮೂರು ವಿಕೆಟ್ ಪಡೆದು ಇಂಗ್ಲೆಂಡ್‌ಗೆ ಕಡಿವಾಣ ಹಾಕಿದರು.

196 ರನ್‌ಗಳ ಮುನ್ನಡೆ ಪಡೆದ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿತು. ಆದರೆ ಆತಿಥೇಯ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಮತ್ತು ಜೋಫ್ರಾ ಆರ್ಚರ್ ಅವರ ದಾಳಿಗೆ ಆರಂಭದಲ್ಲಿಯೇ ಕುಸಿಯಿತು. ತಲಾ ಎರಡು ವಿಕೆಟ್ ಕಬಳಿಸಿದರು. ಇದರಿಂದಾಗಿ ತಂಡವು 44 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಸ್ಮಿತ್ (ಬ್ಯಾಟಿಂಗ್ 31) ಮತ್ತು ಮ್ಯಾಥ್ಯೂ ವೇಡ್ (ಬ್ಯಾಟಿಂಗ್ 15) ತಾಳ್ಮೆಯಿಂದ ಆಡಿ ವಿಕೆಟ್ ಪತನ ತಡೆದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 126 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 497, ಇಂಗ್ಲೆಂಡ್: 107 ಓವರ್‌ಗಳಲ್ಲಿ 301 (ಜೋ ರೂಟ್ 71, ಬೆನ್ ಸ್ಟೋಕ್ಸ್‌ 26, ಜಾಸ್ ಬಟ್ಲರ್ 41, ಮಿಷೆಲ್ ಸ್ಟಾರ್ಕ್ 80ಕ್ಕೆ3, ಜೋಷ್ ಹೇಜಲ್‌ವುಡ್ 57ಕ್ಕೆ4, ಪ್ಯಾಟ್ ಕಮಿನ್ಸ್‌ 60ಕ್ಕೆ3), ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 24.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 81 (ಸ್ಟೀವನ್ ಸ್ಮಿತ್ ಬ್ಯಾಟಿಂಗ್ 31, ಮ್ಯಾಥ್ಯೂ ವೇಡ್ ಬ್ಯಾಟಿಂಗ್ 15, ಸ್ಟುವರ್ಟ್ ಬ್ರಾಡ್ 19ಕ್ಕೆ2, ಜೋಫ್ರಾ ಆರ್ಚರ್ 27ಕ್ಕೆ2) ವಿವರ ಅಪೂರ್ಣ

ಪ್ರತಿಕ್ರಿಯಿಸಿ (+)