ಸೋಮವಾರ, ನವೆಂಬರ್ 18, 2019
24 °C

ಭಾರತದ ಅರ್ಥವ್ಯವಸ್ಥೆ ಕುರಿತು ಆತಂಕಬೇಡ-ಸಚಿವ ಜಾವಡೇಕರ್

Published:
Updated:

ನವದೆಹಲಿ: ಭಾರತ ಆರ್ಥ ವ್ಯವಸ್ಥೆಯ ಸದ್ಯದ ಸ್ಥಿತಿ ಕುರಿತು ಯಾವುದೇ ಅತಂಕ ಬೇಡ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಹೇಳಿದ್ದಾರೆ.

ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡು 100 ದಿನಗಳಾದ ಪ್ರಯುಕ್ತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಹಿಂಜರಿತ, ಕುಸಿಯುತ್ತಿರುವ ಜಿಡಿಪಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಭಾರತದ ಅರ್ಥವ್ಯವಸ್ಥೆ ಶಕ್ತಿಯುತವಾಗಿದ್ದು ಯಾವುದೇ ಆತಂಕವಿಲ್ಲ, ಅರ್ಥ ವ್ಯವಸ್ಥೆಯ ಕುರಿತು ಭಾರತ ದೃಢವಾದ ಹೆಜ್ಜೆ ಇರಿಸಿದ್ದು, 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯ ಗುರಿ ಹೊಂದಿದ್ದೇವೆ. ಈ ಗುರಿ ಮುಟ್ಟುತ್ತೇವೆ. ಇಂತಹ ಆರ್ಥಿಕ ಹಿಂಜರಿತ ತಾತ್ಕಾಲಿಕ, ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ. 

ಇದನ್ನೂ ಓದಿ...ಆರ್ಥಿಕ ಹಿಂಜರಿತ: ಲಘುವಾಗಿ ಪರಿಗಣಿಸುವ ಕಾಲ ಇದಲ್ಲ

ವಿಶ್ವದ ಆರ್ಥಿಕ ಹಿಂಜರಿತ ದೇಶದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇದನ್ನು ಸರಿಪಡಿಸಲು ಸರ್ಕಾರದ ನಿಯಮಗಳಲ್ಲಿ  ಹಲವು ಬದಲಾವಣೆ ತರಲಾಗಿದೆ. ಆ ಮೂಲಕ ಅರ್ಥ ವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನ ನಡೆದಿದೆ. ಇದರಿಂದ ಮುಂಬರುವ ದಿನಗಳಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಾಣಬಹುದು ಎಂದರು. 
ಕಳೆದ ವಾರ ಜಿಡಿಪಿ ಬಿಡುಗಡೆಯಾಗಿದ್ದು, ಶೇ. 5ಕ್ಕೆ ತಲುಪಿದೆ. ಇದು ಕಳೆದ 6 ವರ್ಷಗಳಷ್ಟು ಹಿಂದಿದೆ. 

ಇದನ್ನೂ ಓದಿ...ಆರ್ಥಿಕ ಹಿಂಜರಿತ: ಮೋದಿ ಮೌನ ಅಪಾಯಕಾರಿ –ಪ್ರಿಯಾಂಕಾ

ಪ್ರತಿಕ್ರಿಯಿಸಿ (+)