ಸೋಮವಾರ, ನವೆಂಬರ್ 18, 2019
24 °C

ಬಾಲಿವುಡ್‌: ಸಾರಾ ಜೊತೆ ನಟನೆಗೆ ಸುಶಾಂತ್‌ ನಿರಾಕರಿಸಿದರೇ?

Published:
Updated:

ತಮ್ಮ ಚೊಚ್ಚಲ ಸಿನಿಮಾ ‘ಕೇದಾರನಾಥ’ದಲ್ಲಿ ನಟಿ ಸಾರಾ ಅಲಿಖಾನ್‌ ಅವರು ನಟ ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆ ರೊಮಾನ್ಸ್‌ ಮಾಡಿದ್ದರು. ಈ ಜೋಡಿಯ ಅಭಿನಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಆ ಸಿನಿಮಾದ ಪ್ರಚಾರ ಹಾಗೂ ಹೊರಗಡೆ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿಯ ಬಗ್ಗೆ ಕೆಲ ಗಾಸಿಪ್‌ ಸುದ್ದಿಗಳು ಹರಿದಾಡಿದ್ದವು. ಈಗ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಇವರಿಬ್ಬರ ಕುರಿತ ಗಾಳಿಸುದ್ದಿಗಳೇನೂ ಕಡಿಮೆಯಾಗಿಲ್ಲ. 

ಇತ್ತೀಚೆಗೆ ಸುಶಾಂತ್‌, ಸಾರಾ ಅಲಿಖಾನ್‌ ಜೊತೆ ನಟಿಸುವ ಅವಕಾಶವನ್ನು ನಿರಾಕರಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.  ಜಾಹೀರಾತುವೊಂದರಲ್ಲಿ ಸಾರಾ ಅಲಿಖಾನ್‌ ಜೊತೆ ನಟಿಸುವಂತೆ ಸುಶಾಂತ್‌ನನ್ನು ಕೇಳಿಕೊಂಡಾಗ ಅವರು ನಿರಾಕರಿಸಿದ್ದಾರೆ. ಸುಶಾಂತ್‌ ಸಿಂಗ್‌ಗೆ ಸಾರಾ ಜೊತೆ ನಟಿಸಲು ಇಷ್ಟವಿಲ್ಲದೇ ಆ ರೀತಿ ಮಾಡಿದ್ದಾರೆ ಎಂದು ಬಿ–ಟೌನ್‌ನಲ್ಲಿ ಗುಲ್ಲು ಹಬ್ಬಿದೆ.

ಸದ್ಯ ಸಾರಾ ಅಲಿಖಾನ್‌ ಹೆಸರು ನಟ ಕಾರ್ತಿಕ್‌ ಆರ್ಯನ್‌ ಜೊತೆ ಕೇಳಿಬರುತ್ತಿದೆ. ಈ ಜೋಡಿ ಇಮ್ತಿಯಾಜ್ ಅಲಿಯ ‘ಲವ್ ಆಜ್ ಕಲ್ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ 2020ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)