ಶುಕ್ರವಾರ, ನವೆಂಬರ್ 22, 2019
19 °C

ಭಿನ್ನತೆ ಸೃಷ್ಟಿಸುವ ವಿಚಾರಗಳಿಂದ ದೂರವಿರಿ: ಮುದರ್ರಿಸ್

Published:
Updated:
Prajavani

ಪುತ್ತೂರು: ‘ಧರ್ಮದ ಎಲ್ಲಾ ಕಟ್ಟುಪಾಡುಗಳನ್ನು ಮುಂದುವರಿಸಿಕೊಂಡು ಹೋಗಬೇಕು.  ನಮ್ಮೊಳಗೆ ಭಿನ್ನತೆ ಸೃಷ್ಠಿಸುವ ವಿಚಾರಗಳಿಂದ ದೂರ ಉಳಿಯಬೇಕು’ ಎಂದು ಇಲ್ಲಿಯ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು.

 ಸರ್ವೆ ಗ್ರಾಮದ ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿರುವ ಖಿದ್ಮತುದ್ದೀನ್ ಯಂಗ್‌ಮನ್ಸ್ ಎಸೋಸಿಯೇಶನ್ ಆಶ್ರಯದಲ್ಲಿ ಭಾನುವಾರ ನಡೆದ ಮಜ್ಲಿಸುನ್ನೂರ್ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ರೆಂಜಲಾಡಿ ಮಸೀದಿಯ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಅವರು ಮಾತನಾಡಿ, ‘ದ್ವೇಷ, ಅಸೂಯೆ, ಅಹಂಕಾರಗಳನ್ನು ದೂರವಾಗಿಸಲು ಮತ್ತು ಸ್ನೇಹ, ಸಂಬಂಧಗಳನ್ನು ಗಟ್ಟಿಗೊಳಿಸಲು ಮಜ್ಲಿಸುನ್ನೂರ್ ಕಾರ್ಯಕ್ರಮ ವೇದಿಕೆಯಾಗಿದೆ’ ಎಂದರು.  ರೆಂಜಲಾಡಿ ಮಸೀದಿ ಖತೀಬ್ ರಫೀಕ್ ಫೈಝಿ ಮಾಡನ್ನೂರು ಅವರ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಿತು. ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್, ರೆಂಜಲಾಡಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಹನೀಫ್ ರೆಂಜಲಾಡಿ, ಉಪಾಧ್ಯಕ್ಷ ಝೈನುದ್ದೀನ್ ಜೆ.ಎಸ್, ಕೂಡುರಸ್ತೆ ಮಸೀದಿ ಖತೀಬ್ ಯಾಕೂಬ್ ದಾರಿಮಿ, ಕೂಡುರಸ್ತೆ ಮಸೀದಿ ಅಧ್ಯಕ್ಷ ಪಿ.ಕೆ ಮುಹಮ್ಮದ್ ಕೂಡುರಸ್ತೆ, ರೆಂಜಲಾಡಿ ಯಂಗ್ಮೆನ್ಸ್ ಅಧ್ಯಕ್ಷ ಝೈನುಲ್ ಆಬಿದ್ ರೆಂಜಲಾಡಿ, ಪ್ರಧಾನ ಕಾರ್ಯದರ್ಶಿ ಬಾತಿಷಾ ಪಿ, ಉಪಾಧ್ಯಕ್ಷ ರಫೀಕ್ ಪರಾಡ್, ಕೋಶಾಧಿಕಾರಿ ಇಮ್ರಾನ್ ರೆಂಜಲಾಡಿ, ಜತೆ ಕಾರ್ಯದರ್ಶಿ ಜಾಬಿರ್ ಸುಲ್ತಾನ್  ಇದ್ದರು.

ಪ್ರತಿಕ್ರಿಯಿಸಿ (+)