ಮಂಗಳವಾರ, ನವೆಂಬರ್ 19, 2019
29 °C

ಮಳೆಗಾಲದಲ್ಲಿ ಚರ್ಮದ ರಕ್ಷಣೆ ಹೇಗೆ?

Published:
Updated:
Prajavani

ನಗರದಲ್ಲಿ ಮಳೆಗಾಲ ಇನ್ನೂ ಚುರುಕಾಗಿದೆ. ಮಳೆಗಾಲದಲ್ಲಿ ಕಾಡುವ ಎಕ್ಸಿಮಾವನ್ನು (ಚರ್ಮದ ತುರಿಕೆ) ನಿಭಾಯಿಸುವುದು ಹೇಗೆ ಎನ್ನುವ ಬಗ್ಗೆ ಡಾ. ಪೂರ್ಣಿಮಾ ರಾಮಕೃಷ್ಣ ನೀಡಿರುವ ಸಲಹೆಗಳನ್ನು ‘ಮೆಟ್ರೊ’ ನಿಮ್ಮ ಮುಂದಿಡುತ್ತಿದೆ..

ಎಕ್ಸಿಮಾ ಹಲವಾರು ವಿಭಿನ್ನ ಚರ್ಮದ ಸ್ಥಿತಿಗಳನ್ನು ಸೂಚಿಸುತ್ತದೆ. ಇದರಲ್ಲಿ ಚರ್ಮವು ಕೆಂಪಾಗಿ ಕಿರಿಕಿರಿ ಉಂಟುಮಾಡುತ್ತದೆ. ಗುಳ್ಳೆಗಳು ಏಳಬಹುದು.ಒಂದು ದಿನ ನಿಮ್ಮ ಚರ್ಮವು ಚೆನ್ನಾಗಿರಬಹುದು ಮತ್ತು ಮರುದಿನ ನೀವು ಉರಿಗುಳ್ಳೆಗಳನ್ನು ಅನುಭವಿಸಬಹುದು. ರಾಸಾಯನಿಕ ಸಾಬೂನು ಮತ್ತು ಸುಗಂಧ ಸುಗಂಧ ದ್ರವ್ಯಗಳು, ರತ್ನಗಂಬಳಿಗಳು, ಕಂಬಳಿ ಮತ್ತು ಬಟ್ಟೆಗಳಲ್ಲಿ ಬಳಸುವ ಉಣ್ಣೆ, ಶುಷ್ಕ ಹವಾಮಾನ, ದ್ರಾವಕಗಳು, ಬೆವರು, ಒತ್ತಡ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಸೇರಿದಂತೆ ಹಲವು ಅಂಶಗಳಿಂದ ಎಕ್ಸಿಮಾ ಬರಬಹುದು. ಮಳೆಗಾಲವು ಎಕ್ಸಿಮಾವನ್ನು ತರುತ್ತದೆ ಮತ್ತು ಸಂಬಂಧಿತ ಅಸ್ವಸ್ಥತೆಯನ್ನು ಉಲ್ಬಣಗೊಳಿಸುತ್ತದೆ. ಎಕ್ಸಿಮಾಗೆ ಚಿಕಿತ್ಸೆ ಇಲ್ಲವಾದರೂ, ಉರಿಯೂತದ ಅಪಾಯ ಕಡಿಮೆ ಮಾಡಲು ಕೆಲವು ಆರೈಕೆಗಳನ್ನು ಮಾಡಬಹುದು.

ಸಾಬೂನು: - ಸಾಮಾನ್ಯ ಸಾಬೂನುಗಳು, ರಾಸಾಯನಿಕವಾಗಿರುವುದರಿಂದ ನಿಮ್ಮ ಚರ್ಮವನ್ನು ಮತ್ತಷ್ಟು ಒಣಗಿಸಬಹುದು. ಆದ್ದರಿಂದ, ನಿಮ್ಮ ದೇಹದ ಮೇಲೆ ಸಾಬೂನು ಬಳಕೆ ಕಡಿಮೆಮಾಡಿ. ಕಿರಿಕಿರಿ ಉಂಟುಮಾಡದ ಸಾಬೂನುಗಳನ್ನು ಬಳಸಲು ಪ್ರಯತ್ನಿಸಿ. ಗ್ಲಿಸರಿನೇಟೆಡ್ ಸಾಬೂನು ಕೂಡ ಉತ್ತಮ.  ಹೆಚ್ಚು ಸುಗಂಧವನ್ನು ಹೊಂದಿರುವ ಸೋಪು ಮತ್ತು ಶಾಂಪೂವನ್ನು ಕಡಿಮೆಮಾಡುವುದು ಒಳ್ಳೆಯದು.

ಚರ್ಮದ ತುರಿಕೆಯನ್ನು ಕಡಿಮೆ ಮಾಡಲು ಮಾಯಿಶ್ಚರೈಸರ್‌ ಬಳಸಿ. ಆದರೆ ಸುಗಂಧ ದ್ರವ್ಯ, ಸಂಯೋಜಕ, ಬಣ್ಣ ಅಥವಾ ಸಂರಕ್ಷಕಗಳನ್ನು ಒಳಗೊಂಡಿರುವ ಮಾಯಿಶ್ಚರೈಸರ್‌ಗಳು ನಿಮ್ಮ ಚರ್ಮಕ್ಕೆ ಸಂಬಂಧಿಸಿದಂತೆ ಅಡ್ಡ ಪರಿಣಾಮವನ್ನು ಉಲ್ಬಣಗೊಳಿಸುವುದರಿಂದ ಅವುಗಳನ್ನು ತಪ್ಪಿಸಬೇಕು. ಮಾಯಿಶ್ಚರೈಸರ್ ಅನ್ನು ದೇಹದಾದ್ಯಂತ ಆಗಾಗ್ಗೆ ಲೇಪಿಸಬೇಕು ಅಥವಾ ದಿನಕ್ಕೆ ಎರಡು ಬಾರಿಯಾದರೂ ಲೇಪಿಸಬೇಕು. ಸ್ನಾನ ಅಥವಾ ಶವರ್‌ನಿಂದ ಹೊರಬಂದ ನಂತರ ಚರ್ಮಕ್ಕೆ ಮಾಯಿಶ್ಚರೈಸರ್‌ ಬಳಸುವುದು ಉತ್ತಮ. ಕಳೆದುಹೋದ ತೇವಾಂಶವನ್ನು ನಿಮ್ಮ ಚರ್ಮಕ್ಕೆ ಹಿಂತಿರುಗಿಸಲು ಇದು ಸಹಾಯ ಮಾಡುತ್ತದೆ.

ಎಕ್ಸಿಮಾ ಸಂಭವಿಸುವುದನ್ನು ತಡೆಯಲು ವೆಟ್ ಡ್ರೆಸ್ಸಿಂಗ್ ಪರಿಣಾಮಕಾರಿ ವಿಧಾನ. ಮೊದಲಿಗೆ, ಚರ್ಮಕ್ಕೆ ಮಾಯಿಶ್ಚರೈಸರ್‌ ಹಚ್ಚಿ ಮತ್ತು ಅದನ್ನು ಒದ್ದೆಯಾದ ಬ್ಯಾಂಡೇಜ್‌ನಿಂದ ಮುಚ್ಚಿ. ತೀವ್ರವಾದ ಎಕ್ಸಿಮಾ ಉರಿಗುಳ್ಳೆಗಳಿಂದ ಬಳಲುತ್ತಿರುವಾಗ ಹೀಗೆ ಮಾಡುವುದು ಉತ್ತಮ. ಒದ್ದೆಯಾದ ಬ್ಯಾಂಡೇಜ್ ಅನ್ನು ಚರ್ಮದ ಮೇಲೆ ಸುಮಾರು 15 ನಿಮಿಷದಿಂದ 45 ನಿಮಿಷಗಳವರೆಗೆ ಇಡಬೇಕು. ಪರಿಣಾಮಕಾರಿ ಫಲಿತಾಂಶಕ್ಕಾಗಿ ಇದನ್ನು ದಿನಕ್ಕೆ 3–4 ಬಾರಿ ಪುನರಾವರ್ತಿಸಿ.

ಬಟ್ಟೆಗಳನ್ನು ಚೆನ್ನಾಗಿ ತೊಳೆಯಿರಿ

ಡಿಟರ್ಜೆಂಟ್‌ಗಳಿಂದ ಬಟ್ಟೆಗಳನ್ನು ಒಗೆಯುವುದು, ನಂತರ ಅವುಗಳನ್ನು ಸಾಮಾನ್ಯ ನೀರಿನಿಂದ ಎರಡು ಬಾರಿ ತೊಳೆಯುವುದರಿಂದ ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಟ್ಟೆಗಳಿಂದ ಮಾರ್ಜಕಗಳ ಎಲ್ಲಾ ಕುರುಹುಗಳು ನಾಶವಾಗುವುದು ಅತ್ಯಗತ್ಯ. ಚರ್ಮದ ಕಿರಿಕಿರಿಯನ್ನು ಉಂಟುಮಾಡುವ ಸುಗಂಧ ದ್ರವ್ಯಗಳನ್ನು ಒಳಗೊಂಡಿರುವುದರಿಂದ ಫ್ಯಾಬ್ರಿಕ್ ಮೆದುಗೊಳಿಸುವಿಕೆಯ ಬಳಕೆಯನ್ನು ಸಹ ಕಡಿಮೆ ಮಾಡಬೇಕು.

ಕೈಗವಸುಗಳನ್ನು ಧರಿಸುವ ಅಭ್ಯಾಸ ಮಾಡಿ: ಅಡುಗೆಗಳನ್ನು ಮಾಡುವಾಗ ಅಥವಾ ಇತರ ಮನೆಯ ಕೆಲಸಗಳನ್ನು ಮಾಡುವಾಗ ಕೈಗವಸುಗಳನ್ನು ಧರಿಸುವುದು ಬಹಳ ಮುಖ್ಯ. ಏಕೆಂದರೆ ಸಾಬೂನುಗಳಲ್ಲಿ ಇಂತಹ ಅನೇಕ ಅಂಶಗಳು ಇರುವುದರಿಂದ ತುರಿಕೆ ಉಂಟಾಗುತ್ತದೆ. ಅದು ನಿಮ್ಮ ಚರ್ಮವನ್ನು ವಿಕಾರಗೊಳಿಸಬಹುದು. ಬೆವರು ಹೀರಿಕೊಳ್ಳಲು ಹತ್ತಿ ಲೈನರ್ ಇರುವ ರಬ್ಬರ್ ಕೈಗವಸು ಬಳಸುವುದು ಸೂಕ್ತ.

ಆಗಾಗ್ಗೆ ಸ್ನಾನ ಮಾಡುವುದನ್ನು ತಪ್ಪಿಸಿ: ನೀವು ಎಕ್ಸಿಮಾ ರೋಗಿಯಾಗಿದ್ದರೆ, ನೀವು ಆಗಾಗ್ಗೆ ಸ್ನಾನ ಮಾಡುವುದನ್ನು ತಪ್ಪಿಸುವುದು ಅತ್ಯಗತ್ಯ. ದಿನಕ್ಕೆ ಒಂದು ಅಥವಾ ಎರಡು ಬಾರಿ ಸ್ನಾನ ಸಾಕು.

ಸ್ನಾನ ಮಾಡಿದ ನಂತರ ನಿಮ್ಮ ಚರ್ಮದ ಮೇಲೆ ತುಂಬಾ ಕಠಿಣವಾಗಿ ಉಜ್ಜಬೇಡಿ. ಉಜ್ಜುವ ಬದಲು ಮೃದುವಾದ ಟವೆಲ್‌ನಿಂದ ನಿಮ್ಮ ಚರ್ಮವನ್ನು ಒಣಗಿಸಿ.

ಪೌಷ್ಠಿಕಾಂಶದ ಪೂರಕಗಳು

ಎಕ್ಸಿಮಾ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಗುಲಾಬಿ ಎಣ್ಣೆ, ದೊಡ್ಡಪತ್ರೆ ಎಣ್ಣೆಗಳನ್ನು ಬಳಸಬಹುದು.

ಜೀವನಶೈಲಿ

ನೀವು ಎಕ್ಸಿಮಾ ಹೊಂದಿದ್ದರೆ ಒತ್ತಡವನ್ನು ತಪ್ಪಿಸಿ. ಓಟ, ವಾಕಿಂಗ್ ಅಥವಾ ಯೋಗದಂತಹ ಚಟುವಟಿಕೆಗಳಿಗೆ ಸಮಯ ಕೊಡಿ. ಇದು ಒತ್ತಡವನ್ನು ನಿಯಂತ್ರಿಸಲು ಮತ್ತು ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ತುರಿಕೆ ತಪ್ಪಿಸಲು ನಿಮ್ಮ ಬೆರಳಿನ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ.

ಸ್ತನ್ಯಪಾನ

ಅನುವಂಶೀಯತೆಯಿಂದಾಗಿ ನಿಮ್ಮ ಮಗುವಿಗೆ ಎಕ್ಸಿಮಾದ ಅಪಾಯವಿದ್ದರೆ ಮೊದಲ 6 ತಿಂಗಳು ಅಥವಾ ಒಂದು ವರ್ಷ ಸ್ತನ್ಯಪಾನ ಮಾಡುವುದು ಉತ್ತಮ. ಶಿಶುಗಳನ್ನು ಸಾಕು ಪ್ರಾಣಿಗಳಿಂದಾಗುವ ಅಲರ್ಜಿಯಿಂದ ತಪ್ಪಿಸಿ. ಹಲವು ಮುನ್ನೆಚ್ಚರಿಕೆಗಳ ನಂತರವೂ ನಿಮ್ಮ ಎಕ್ಸಿಮಾದಲ್ಲಿ ಯಾವುದೇ ಪರಿಹಾರ ಸಿಗದಿದ್ದರೆ ನಿಮ್ಮ ಚರ್ಮರೋಗ ವೈದ್ಯರನ್ನು ಭೇಟಿ ಮಾಡಿ. ಸ್ಥಿತಿಯನ್ನು ಮೊದಲೇ ಗುರುತಿಸುವುದು ಬಹಳ ಮುಖ್ಯ. ಇದರಿಂದ ಚರ್ಮರೋಗವನ್ನು ತಡೆಯಬಹುದು ಅಥವಾ ಪರಿಣಾಮ ಕೆಟ್ಟದಾಗುವುದನ್ನು ನಿಲ್ಲಿಸಬಹುದು.

ಡಾ. ಪೂರ್ಣಿಮಾ ರಾಮಕೃಷ್ಣ,
ಅಪೊಲೊ ಕ್ರೆಡೆಲ್, ಕೋರಮಂಗಲ ಮತ್ತು ಜಯನಗರ.

ಪ್ರತಿಕ್ರಿಯಿಸಿ (+)