ಭಾನುವಾರ, ನವೆಂಬರ್ 17, 2019
24 °C

ಟ್ರ್ಯಾಕ್‌ ಸೈಕ್ಲಿಂಗ್: ಭಾರತಕ್ಕೆ ಸಮಗ್ರ ಪ್ರಶಸ್ತಿ

Published:
Updated:

ನವದೆಹಲಿ (ಪಿಟಿಐ): ಭಾರತದ ರೋನಾಲ್ಡೊ ಲೈಥೋಂಜಮ್ ಇಲ್ಲಿ ನಡೆಯುತ್ತಿರುವ  ಏಷ್ಯಾ ಕಪ್ ಟ್ರ್ಯಾಕ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಚಿನ್ನದ ಪದಕ ಗೆದ್ದರು. ಇದರೊಂದಿಗೆ ಭಾರತ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಭಾರತ ತಂಡವು ಒಟ್ಟು 10 ಚಿನ್ನ, ಎಂಟು ಬೆಳ್ಳಿ ಮತ್ತು ಏಳು ಕಂಚಿನ ಪದಕ ಗಳಿಸಿ, ಪದಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕೊನೆಯ ದಿನವಾದ ಬುಧವಾರ ತಂಡವು ಎರಡು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದಿತು.  ಉಜ್ಬೇಕಿಸ್ತಾನ ತಂಡವು ನಾಲ್ಕು ಚಿನ್ನ, ಮೂರು ಬೆಳ್ಳಿ ಗೆದ್ದು ಎರಡನೇ ಸ್ಥಾನ ಪಡೆಯಿತು. ಮಲೇಷ್ಯಾ ತಂಡವು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿಯೊಂದಿಗೆ ಮೂರನೇ ಸ್ಥಾನ ಪಡೆಯಿತು.

ರೊನಾಲ್ಡೊ ಅವರು ಜೂನಿಯರ್ ಕೀರಿನ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು.

 

ಪ್ರತಿಕ್ರಿಯಿಸಿ (+)