ಶುಕ್ರವಾರ, ನವೆಂಬರ್ 22, 2019
22 °C

ವಿರಾಟ್ ಟ್ವೀಟ್; ಧೋನಿ ವಿದಾಯದ ಮುನ್ನುಡಿ?

Published:
Updated:
Prajavani

ನವದೆಹಲಿ: ‘ಆ ಪಂದ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅದೊಂದು ವಿಶೇಷ ರಾತ್ರಿಯಾಗಿತ್ತು. ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಓಡಿಸುವ ಮಾದರಿಯಲ್ಲಿಯೇ ನನ್ನನ್ನು ಓಡಿಸಿದ್ದ ಆ ಮನುಷ್ಯ’–

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು 2016ರ ವಿಶ್ವ ಟ್ವೆಂಟಿ–20 ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮ್ಮ ಹಾಗೂ ಮಹೇಂದ್ರಸಿಂಗ್ ಧೋನಿ ಅವರ ಜೊತೆಯಾಟದ ಚಿತ್ರವು ಬಹಳಷ್ಟು ವೈರಲ್ ಆಗಿದೆ. ಅದರೊಂದಿಗೆ ಧೋನಿ ನಿಯಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಹೇಳುವುದು ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾ ನಡೆದಿದ್ದ ಆ ಪಂದ್ಯದಲ್ಲಿ ಕೊಹ್ಲಿ ಅಜೇಯ 82 (51ಎಸೆತ) ರನ್ ಗಳಿಸಿದರು. ಅದರಲ್ಲಿ ಅವರು ಧೋನಿ (ಔಟಾಗದೆ 18 ರನ್) ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿದ್ದರು.

ಕೊಹ್ಲಿಯವರು ಈ ಟ್ವೀಟ್‌ ಅನ್ನು ಧೋನಿಗೆ ವಿದಾಯ ಹೇಳಲೆಂದೇ ಹಾಕಿದ್ದಾರೆಂಬ ಅನುಮಾನದಿಂದ ಹಲವಾರು ಜನರು ಪ್ರತಿಕ್ರಿಯಿಸಿದ್ದಾರೆ.

ಗುರುವಾರ ನಡೆದ ಭಾರತ ತಂಡದ ಆಯ್ಕೆ ಸಮಿತಿಯ ಸಭೆಯಲ್ಲಿ ಈ ಸಂದೇಶ ಪ್ರತಿಧ್ವನಿಸಿತು.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್, ‘ಈ ವದಂತಿಗಳು ಎಲ್ಲಿಂದ ಮತ್ತು ಹೇಗೆ ಶುರುವಾದವೋ ಗೊತ್ತಿಲ್ಲ. ಅವುಗಳು ಸತ್ಯವಾಗಿರಲು ಸಾಧ್ಯವಿಲ್ಲ. ಸ್ವತಃ ಧೋನಿ ಕೂಡ ನಮಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)