ಶನಿವಾರ, ನವೆಂಬರ್ 23, 2019
18 °C

ಸುಳ್ಳು ದಾಖಲೆ; ಪಿಎಸ್ಐ ಅಮಾನತು

Published:
Updated:

ಕೊರಟಗೆರೆ: ಸುಳ್ಳು ದೃಢೀಕರಣ ದಾಖಲೆ ನೀಡಿದ ಆರೋಪದ ಮೇಲೆ ತಾಲ್ಲೂಕಿನ ಕೋಳಾಲ ಸಬ್ ಇನ್‌ಸ್ಪೆಕ್ಟರ್ ಕೆ.ಸಂತೋಷ್ ಅವರನ್ನು ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‌ಚಂದ್ರ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.

ಸಂತೋಷ್ ವಿರುದ್ಧ 2016ರಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ವಿಚಾರಣೆ ಬಾಕಿ ಇದ್ದರೂ ಪಿಎಸ್ಐ ಹುದ್ದೆಯಿಂದ ಪಿಐ ಹುದ್ದೆಗೆ ಮುಂಬಡ್ತಿ ವೇಳೆ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ಬಾಕಿ ಇಲ್ಲವೆಂದು ಸುಳ್ಳು ದೃಢೀಕರಣ ಪತ್ರ ನೀಡಿದ್ದರು.

ಪಿಎಸ್ಐ ಹುದ್ದೆಯಲ್ಲಿದ್ದುಕೊಂಡು ಹುದ್ದೆಗೆ ತಕ್ಕಂತೆ ನಡೆದುಕೊಳ್ಳದೆ, ಬಾಕಿ ಇರುವ ಪ್ರಕರಣವನ್ನು ಮರೆ ಮಾಚುವ ಮೂಲಕ ಅತೀವ ನಿರ್ಲಕ್ಷ್ಯ, ಬೇಜವಾಬ್ದಾರಿತನ, ದುರ್ನಡತೆ ಹಾಗೂ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಅಮಾನತು ಪಡಿಸಲಾಗಿದೆ.

ಪ್ರತಿಕ್ರಿಯಿಸಿ (+)