ಗುರುವಾರ , ನವೆಂಬರ್ 21, 2019
20 °C

ಶಂಕಿತ ಡೆಂಗಿ: ಯುವಕ ಸಾವು

Published:
Updated:
Prajavani

ಉಳ್ಳಾಲ:  ತೊಕ್ಕೊಟ್ಟು ನಿವಾಸಿ ಯುವಕ ಜ್ವರಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,  ಭಾನುವಾರ  ಮೃತಪಟ್ಟಿದ್ದಾರೆ. ಇದು ಡೆಂಗಿ ಜ್ವರ ಎಂದು ಅನುಮಾನಿಸಲಾಗಿದೆ ಆಸ್ಪತ್ರೆ ಮೂಲಗಳು ತಿಳಿಸಿವೆ.

ತೊಕ್ಕೊಟ್ಟು ಭಟ್ನಗರ ನಿವಾಸಿ ಹರ್ಷಿತ್ ಗಟ್ಟಿ (25) ಮೃತರು. ಹರೀಶ್ ಗಟ್ಟಿ ಹಾಗೂ ಮಮತಾ ಗಟ್ಟಿ ದಂಪತಿ ಪುತ್ರ. ಇದೇ  12 ರಂದು ತೊಕ್ಕೊಟ್ಟು ಸಹರಾ ಆಸ್ಪತ್ರೆಗೆ ದಾಖಲಾಗಿದ್ದ ಹರ್ಷಿತ್ ಅವರನ್ನು 14 ರಂದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ‌.  ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂಧಿಸದೆ ಹರ್ಷಿತ್ ಮೃತಪಟ್ಟರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಹರ್ಷಿತ್, ಮಂಗಳೂರು ಮನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಮಹಡಿಯಿಂದ ಕೆಳಬಿದ್ದು ಸೊಂಟದ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದರು‌ . ಈಚೆಗಷ್ಟೇ ಚೇತರಿಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)