ಮಂಗಳವಾರ, ನವೆಂಬರ್ 19, 2019
29 °C

ವಿಶ್ವ ಕುಸ್ತಿ: ರವಿಗೆ ‘ಮೊದಲ’ ಗೆಲುವು

Published:
Updated:

ನೂರ್ ಸುಲ್ತಾನ್, ಕಜಕಸ್ತಾನ: ಭಾರತದ ಗ್ರೀಕೊ–ರೋಮನ್ ಶೈಲಿಯ ಕುಸ್ತಿಪಟುಗಳು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ.

97 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ರವಿ ಕುಮಾರ್ ಮೊದಲ ಬೌಟ್‌ನಲ್ಲಿ ಗೆದ್ದು ಭಾರತಕ್ಕೆ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಜಯ ತಂದರು. ಆದರೆ ನಂತರದ ಬೌಟ್‌ನಲ್ಲಿ ಸೋತರು. ಮನೀಷ್ (67 ಕೆಜಿ) ಮತ್ತು ಸುನಿಲ್ ಕುಮಾರ್ (87 ಕೆಜಿ) ಪ್ರತಿಸ್ಪರ್ಧೆ ಒಡ್ಡದೆ ಹೊರಬಿದ್ದರು. ಚೀನಾ ತೈಪೆಯ ಚೆಂಗ್ ಹೋ ಚೆನ್ ಎದುರಿನ ಬೌಟ್‌ನಲ್ಲಿ ರವಿ 5–0 ಅಂತರದ ಜಯ ಗಳಿಸಿದರು. ಜೆಕ್ ಗಣರಾಜ್ಯದ ಆರ್ಥರ್ ಎದುರಿನ ಮುಂದಿನ ಬೌಟ್‌ನಲ್ಲಿ ಸೋತರು.

ಪ್ರತಿಕ್ರಿಯಿಸಿ (+)