ಗುರುವಾರ , ನವೆಂಬರ್ 21, 2019
21 °C

ನ.9ರಂದು ಕರ್ತಾರಪುರ ಕಾರಿಡಾರ್‌ ಸಂಚಾರಕ್ಕೆ ಮುಕ್ತ

Published:
Updated:

ಲಾಹೋರ್‌: ‘ಬಹುನಿರೀಕ್ಷಿತ ಕರ್ತಾರಪುರ ಕಾರಿಡಾರ್‌ ನವೆಂಬರ್‌ 9ರಂದು ಸಂಚಾರಕ್ಕೆ ಮುಕ್ತವಾಗಲಿದೆ’ ಎಂದು ಪಾಕಿಸ್ತಾನ ಘೋಷಿಸಿದೆ. 

ಉದ್ದೇಶಿತ ಕರ್ತಾಪುರ ಕಾರಿಡಾರ್‌ಗೆ ಸ್ಥಳೀಯ ಮತ್ತು ವಿದೇಶಿ ಪತ್ರಕರ್ತರು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.

‘ಯೋಜನೆಯ ಕಾಮಗಾರಿ ಶೇ 86ರಷ್ಟು ಮುಕ್ತಾಯವಾಗಿದೆ. ಮುಂದಿನ ತಿಂಗಳೊಳಗೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲಿವೆ’ ಎಂದು ಯೋಜನೆಯ ನಿರ್ದೇಶಕ ಅತೀಫ್‌ ಮಜೀದ್‌ ತಿಳಿಸಿದರು. 

ಪಾಕಿಸ್ತಾನದ ಕರ್ತಾಪುರದಲ್ಲಿರುವ ದರ್ಬಾರ್ ಸಾಹಿಬ್‌ ಮತ್ತು ಗುರುದಾಸ್‌ಪುರದ ಡೇರಾ ಬಾಬಾ ನಾನಕ್‌ ನಡುವೆ ಈ ಕಾರಿಡಾರ್‌ ಸಂಪರ್ಕ ಕಲ್ಪಿಸಲಿದ್ದು, ಭಾರತೀಯ ಸಿಖ್‌ ಯಾತ್ರಿಕರು ಮುಕ್ತವಾಗಿ ಸಂಚರಿಸಲು ಇದು ಅವಕಾಶ ಕಲ್ಪಿಸಲಿದೆ. ಇದಕ್ಕೆ ವೀಸಾ ಅಗತ್ಯವಿರುವುದಿಲ್ಲ. ಕರ್ತಾಪುರ ಸಾಹಿಬ್‌ಗೆ ಭೇಟಿ ನೀಡಲಷ್ಟೇ ಅನುಮತಿ ಪಡೆಯಬೇಕು.

ಪ್ರತಿಕ್ರಿಯಿಸಿ (+)