ಬುಧವಾರ, ನವೆಂಬರ್ 13, 2019
23 °C
ರಾಜ್ಯ ಸಬ್ ಜೂನಿಯರ್ ಬಾಲ್ ಬ್ಯಾಡ್ಮಿಂಟನ್

ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್‍ ಚಾಂಪಿಯನ್‌

Published:
Updated:
Prajavani

ಬೆಂಗಳೂರು: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಾಲಕ ಮತ್ತು ಬಾಲಕಿಯರ ತಂಡಗಳು 39ನೇ ರಾಜ್ಯ ಸಬ್ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‍ಶಿಪ್‍ನ ಚಾಂಪಿಯನ್ ಆಗಿ ಹೊರಹೊಮ್ಮಿವೆ.

ಕರ್ನಾಟಕ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆ ಹಾಗೂ ಬೆಂಗಳೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಗಳ ಆಶ್ರಯದಲ್ಲಿ ಬೆಂಗಳೂರಿನ ರಾಜೇಶ್ವರಿ ವಿದ್ಯಾಶಾಲೆಯ ಆವರಣದಲ್ಲಿ ಟೂರ್ನಿ ನಡೆಯಿತು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ತಂಡ ಚಿಂತಾಮಣಿ ಬಿಬಿಸಿ ತಂಡವನ್ನು 35-33, 28-35, 35-33 ಸೆಟ್‌ಗಳಿಂದ ಮಣಿಸಿತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡ ಸ್ವರ್ಣಾಂಬ ತಂಡವನ್ನು, ಚಿಂತಾಮಣಿ ತಂಡ ಶ್ರೀ ರಾಜೇಶ್ವರಿ ಯೂತ್ ಕ್ಲಬ್ ತಂಡವನ್ನು ಸೋಲಿಸಿತ್ತು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ತಂಡ ಸ್ವರ್ಣಾಂಬ ಹೊನ್ನುಡಿಕೆ ತಂಡವನ್ನು 35-30, 35-21 ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡ ಮಾಕವಳ್ಳಿ ತಂಡವನ್ನು, ಸ್ವರ್ಣಾಂಬ ಹೊನ್ನುಡಿಕೆ ತಂಡ ಅರಕಲಗೂಡು ತಂಡವನ್ನು ಸೋಲಿಸಿತ್ತು.

ಚಿಂತಾಮಣಿ ತಂಡದ ಧೀರಜ್ ರೆಡ್ಡಿ ಹಾಗೂ ಆಳ್ವಾಸ್ ತಂಡದ ಪ್ರಿಯಾ.ಬಿ.ಜಿ. ಕ್ರಮವಾಗಿ ಅತ್ಯುತ್ತಮ ಆಟಗಾರ ಹಾಗೂ ಆಟಗಾರ್ತಿ ಪ್ರಶಸ್ತಿಗಳನ್ನು ಪಡೆದುಕೊಂಡರು.

ಪ್ರತಿಕ್ರಿಯಿಸಿ (+)