ಮಂಗಳವಾರ, ನವೆಂಬರ್ 12, 2019
20 °C

‘ಜಲಮೂಲ ಮಾಹಿತಿಗೆ ಇಸ್ರೊ ನೆರವು’

Published:
Updated:
Prajavani

ಬೆಂಗಳೂರು: ಇಂದಿನ ತಂತ್ರಜ್ಞಾನದ ಯುಗದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಾಯೋಜಿತ ಭುವನ ಇ-ಪೋರ್ಟಲ್‌ನ ಮುಖಾಂತರ ಜನ ಸಾಮಾನ್ಯರು ಕೂಡಾ ಜಲಮೂಲಗಳು ಮತ್ತು ಸಂಪನ್ಮೂಲಗಳ ಬಗ್ಗೆ ಬೆರಳ ತುದಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಇಸ್ರೊದ ನಿರ್ದೇಶಕ ಡಾ.ಪಿ. ಜಿ. ದಿವಾಕರ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಭೂಗೋಳ ವಿಜ್ಞಾನ ವಿಭಾಗದಲ್ಲಿ ಸೋಮವಾರ ಯುಜಿಸಿ ಎಸ್‌ಎಪಿಡಿ ಆರ್‌ಎಸ್‌–11 ಯೋಜನೆಯಡಿಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳು ಮತ್ತು ಜಿಯೋಸ್ಪೇಷಿಯಲ್ ಪರಿಹಾರಗಳು ಎಂಬ ವಿಷಯವಾಗಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಮಣ್ಣು ಮತ್ತು ನೀರಿನ ಸಂರಕ್ಷಣೆಯು ಮಾನವನ ಮುಖ್ಯ ಕರ್ತವ್ಯವಾಗಿದ್ದು ಮತ್ತು ಅದರ ಅವಶ್ಯಕತೆಯು ಮಾನವನಿಗೆ ಅತ್ಯಮೂಲ್ಯವಾಗಿದೆ’ ಎಂದರು.

ಕುಲಪತಿ ಪ್ರೊ.ಕೆ. ಆರ್‌. ವೇಣುಗೋಪಾಲ್, ಕುಲಸಚಿವ ಪ್ರೊ.ಬಿ. ಕೆ. ರವಿ, ಭೂಗೋಳ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಅಶೋಕ್ ಡಿ. ಹಂಜಗಿ, ಡಾ.ದಿವ್ಯಾ ರಾಜೇಶ್ವರಿ ಇದ್ದರು.

 

ಪ್ರತಿಕ್ರಿಯಿಸಿ (+)