ಮಂಗಳವಾರ, ನವೆಂಬರ್ 19, 2019
23 °C

ಟ್ರಾಫಿಕ್ ವಾರ್ಡನ್ ನೇಮಕ: ಕಮಿಷನರ್‌

Published:
Updated:

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಚಾರ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಸಂಚಾರ ನಿರ್ವಹಿಸುವ (ಟ್ರಾಫಿಕ್ ವಾರ್ಡ್‍ನ್) ಆಸಕ್ತ ಸಾರ್ವಜನಿಕರನ್ನು ಅಹ್ವಾನಿಸಲಾಗಿದೆ.

ಈ ಬಗ್ಗೆ ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಆಸಕ್ತ ವ್ಯಕ್ತಿಗಳು ತಮ್ಮ ಮನೆ ಸಮೀಪದ ಸಂಚಾರ ಪೊಲೀಸ್ ಠಾಣಾಧಿಕಾರಿಯನ್ನು ಭೇಟಿ ಆಗುವಂತೆ ಸೂಚಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ನಗರದಲ್ಲಿ ಸದ್ಯ 44 ಸಂಚಾರ ಪೊಲೀಸ್ ಠಾಣೆಗಳಿವೆ. 290 ಮಂದಿ ಟ್ರಾಫಿಕ್ ವಾರ್ಡನ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆಯನ್ನು 2,500ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಈ ರೀತಿ ಸೇವೆ ಮಾಡುವ ವ್ಯಕ್ತಿಗಳಿಗೆ ವೇತನ ನೀಡುವುದಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)