ಬುಧವಾರ, ನವೆಂಬರ್ 13, 2019
25 °C

ಪಿಎಫ್‌ಗೆ ಶೇ 8.65 ಬಡ್ಡಿ: ಕೇಂದ್ರದಿಂದ ಅಧಿಸೂಚನೆ

Published:
Updated:

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್‌) ಬಡ್ಡಿ ದರವನ್ನು 2018–19ನೇ ಹಣಕಾಸು ವರ್ಷಕ್ಕೆ ಶೇ 8.65ಕ್ಕೆ ನಿಗದಿಪಡಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

6 ಕೋಟಿಗೂ ಅಧಿಕ ಉದ್ಯೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕಾರ್ಮಿಕ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಭವಿಷ್ಯ ನಿಧಿ ಸಂಘಟನೆಯ ಸದಸ್ಯರ ಖಾತೆಗೆ ಈ ಬಡ್ಡಿದರ ಜಮೆ ಆಗಲಿದೆ ಎಂದು ಹೇಳಿವೆ.

ಪಿಂಚಣಿ ನಿಧಿ ನಿರ್ವಹಣಾ ಸಂಸ್ಥೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಫೆಬ್ರುವರಿ 21ರಂದು ಶೇ 8.65ರ ಬಡ್ಡಿದರಕ್ಕೆ ಅನುಮತಿ ನೀಡಿತ್ತು.

ಪ್ರತಿಕ್ರಿಯಿಸಿ (+)