ಮಂಗಳವಾರ, ನವೆಂಬರ್ 12, 2019
28 °C

ಪೆರರಸು ಸಿನಿಮಾದಲ್ಲಿ ವಿಜಯ್‌

Published:
Updated:
Prajavani

ನಟ ವಿಜಯ್‌ ಅವರೊಂದಿಗೆ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಪೆರರಸು ವಿಶೇಷವಾದ ಸ್ಕ್ರಿಪ್ಟ್‌ ಸಿದ್ಧಮಾಡಿದ್ದಾರಂತೆ. ಈ ಜೋಡಿ ಒಟ್ಟಾಗಿ ಮಾಡಿದ್ದ ‘ಶಿವಕಾಸಿ’ ಹಾಗೂ ‘ತಿರುಪತಿ’ ಸಿನಿಮಾಗಳು ಹಿಟ್ ಆಗಿದ್ದವು. ನಟ ವಿಜಯ್‌ ಕೂಡ ಈ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಸ್ಕ್ರಿಪ್ಟ್‌ ಬಗ್ಗೆ ಪೆರರಸು ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

ಸ್ಟಂಟ್‌ ಕೊರಿಯೋಗ್ರಾಫರ್‌ ಜಾಗ್ವಾರ್‌ ತಂಗಮ್‌ ಈ ಸಿನಿಮಾದ ಕುರಿತು ಮಾತನಾಡಿದ್ದಾರೆ. ‘ಪೆರರಸು ಹಾಗೂ ವಿಜಯ್‌ ಜೋಡಿಯಲ್ಲಿ ಬರುವ ಮುಂದಿನ ಸಿನಿಮಾಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ಮೊದಲ ಸುತ್ತಿನ ಮಾತುಕತೆ ನಡೆದಿದೆ. ನಾಯಕಿಯ ಆಯ್ಕೆ ಪ್ರಕ್ರಿಯೆ ಮುಗಿದ ಕೂಡಲೇ ಶೂಟಿಂಗ್ ಆರಂಭಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ವಿಜಯ್‌ ಈಗ ‘ಬಿಗಿಲ್‌’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಫುಟ್‌ಬಾಲ್‌ ಕೋಚ್ ಆಗಿ ಈ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ನಯನತಾರಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಪ್ರತಿಕ್ರಿಯಿಸಿ (+)