ಶನಿವಾರ, ನವೆಂಬರ್ 23, 2019
23 °C

ಫೆಬ್ರುವರಿಗೆ ‘ಭೂತ್‌ ಪಾರ್ಟ್‌ ಒನ್‌’

Published:
Updated:

ವಿಕ್ಕಿ ಕೌಶಲ್‌ ಅಭಿನಯದ ‘ಭೂತ್‌ ಪಾರ್ಟ್‌ ಒನ್‌: ದಿ ಹಂಟೆಡ್‌ ಶಿಪ್‌’ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ವರ್ಷ ನವೆಂಬರ್‌ 15ಕ್ಕೆ ಸಿನಿಮಾ ಬಿಡುಗಡೆ ಮಾಡಲು ಮುಹೂರ್ತ ನಿಗಧಿ ಮಾಡಲಾಗಿತ್ತು. 2020ರ ಫೆಬ್ರುವರಿ 21ಕ್ಕೆ ಚಿತ್ರ ಬಿಡುಗಡೆಯಾಲಿದೆ ಎಂದು ಸಿನಿ ತಂಡ ಪೋಸ್ಟರ್‌ನೊಂದಿಗೆ ಟ್ವಿಟರ್‌ನಲ್ಲಿ ಘೋಷಿಸಿದೆ.

ವಿಕ್ಕಿ ಕೌಶಲ್‌ ಅವರ ಮೊದಲ ಹಾರರ್‌ ಸಿನಿಮಾ ಇದಾಗಿದೆ. ಕರಣ್‌ ಜೋಹರ್ ನಿರ್ಮಾಣ ಮಾಡಿದ್ದಾರೆ. ಭಾನು ಪ್ರತಾಪ್‌ ಸಿಂಗ್ ಅವರ ನಿರ್ದೇಶನ ಇದೆ. ಭೂಮಿ ಪಡ್ನೇಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಮುಂಬೈನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ತೆಗೆಯಲಾಗಿದೆಯಂತೆ. ಹಾರರ್‌ ಜೊತೆಗೆ ಕಾಮಿಡಿ ದೃಶ್ಯಗಳು ಕೂಡ ಮನರಂಜನೆ ನೀಡಲಿವೆ ಎಂದು ತಂಡ ಹೇಳಿದೆ.

ಪ್ರತಿಕ್ರಿಯಿಸಿ (+)