ಬುಧವಾರ, ನವೆಂಬರ್ 20, 2019
21 °C

ದೀಪಾವಳಿಗೆ ‘ಹೌಸ್‌ಫುಲ್‌’

Published:
Updated:
Prajavani

ಈ ವರ್ಷದ ದೀಪಾವಳಿಗೆ ಅಕ್ಷಯ್‌ ಕುಮಾರ್ ಅಭಿನಯದ ‘ಹೌಸ್‌ಫುಲ್‌ 4’, ಹಾಗೂ ರಾಜ್‌ಕುಮಾರ್‌ ರಾವ್‌ ನಟನೆಯ ‘ಮೇಡ್‌ ಇನ್‌ ಚೀನಾ’ ಸಿನಿಮಾಗಳು ಬಿಡುಗಡೆಯಾಗಲಿವೆ.

ಎರಡೂ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾದರೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ಗೆ ತೊಂದರೆಯಾಗಲಿದೆ. ಆದರೆ ಇಲ್ಲಿಯವರೆಗೂ ಎರಡೂ ಸಿನಿ ತಂಡಗಳು ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿವೆ.

‘ಹೌಸ್‌ಫುಲ್‌ 4’ ಸಿನಿಮಾದ ಮೊದಲ ಲುಕ್‌ ಬಿಡುಗಡೆಯಾದಾಗಿನಿಂದ ಈ ಚಿತ್ರದ ಟ್ರೇಲರ್‌ ಕುರಿತು ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ. ಸೆಪ್ಟೆಂಬರ್‌ 27ಕ್ಕೆ ಟ್ರೇಲರ್‌ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿದೆ.

ಡಿಜಿಟಲ್‌ ವೇದಿಕೆಯಲ್ಲಿ ಬಿಡುಗಡೆ ಮಾಡುವುದಕ್ಕಿಂತ ಮೊದಲು ಮುಂಬೈನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಈ ಸಿನಿಮಾದಲ್ಲಿ ಅಭಿನಯಿಸಿರುವ ಅಕ್ಷಯ್‌ ಕುಮಾರ್, ರಿತೇಶ್‌ ದೇಶ್‌ಮುಖ್‌, ಬಾಬಿ ಡಿಯೋಲ್‌, ಕೃತಿ ಸೈನಾನ್‌, ಕೃತಿ ಕರಬಂಧ, ಪೂಜಾ ಹೆಗ್ಡೆ ಕೂಡ ಕಾರ್ಯಕ್ರಮದಲ್ಲಿ ನೃತ್ಯ ಮಾಡಲಿದ್ದಾರೆ.

ಇತರ ನಟರಾದ ರಾನಾ ದಗ್ಗುಬಾಟಿ, ಜಾನಿ ಲಿವರ್‌, ಜಾಮಿ ಲಿವರ್‌, ರಂಜಿತ್‌, ಚಂಕಿ ಪಾಂಡೆ, ಶರದ್‌ ಕಲ್ಕರ್‌ ಕೂಡ ಕಾರ್ಯಕ್ರಮದಲ್ಲಿ ಹಾಜರಿ ಹಾಕಲಿದ್ದಾರೆ ಎಂದು ತಂಡ ಟ್ವಿಟರ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

ಈ ಸಿನಿಮಾವನ್ನು ಸಜಿದ್‌ ನದಿಯಾದ್‌ವಾಲಾ ನಿರ್ಮಾಣ ಮಾಡಿದ್ದಾರೆ.  ಫರಾದ್ ಸಂಜಿ ಅವರ ನಿರ್ದೇಶನ ಇದೆ. ಹೃತಿಕ್‌ ರೋಷನ್‌ ಹಾಗೂ ಟೈಗರ್ ಶ್ರಾಫ್‌ ಅವರು ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಎಂದು ಸಿನಿ ತಂಡ ಹೇಳಿದೆ.

ಪ್ರತಿಕ್ರಿಯಿಸಿ (+)