142 ವಿದ್ಯಾರ್ಥಿಗಳಿಗೆ ಚಿನ್ನದ ಪದಕ: 13 ಜನರಿಗೆ ನಗದು ಬಹುಮಾನ

7

142 ವಿದ್ಯಾರ್ಥಿಗಳಿಗೆ ಚಿನ್ನದ ಪದಕ: 13 ಜನರಿಗೆ ನಗದು ಬಹುಮಾನ

Published:
Updated:

ಗುಲ್ಬರ್ಗ: ವಿವಿಧ ನಿಕಾಯಗಳ ಗರಿಷ್ಠ ಚಿನ್ನದ ಪದಕ ಪಡೆದ 17 ವಿದ್ಯಾರ್ಥಿಗಳು ಗುರುವಾರ ನಡೆಯಲಿರುವ ಗುಲ್ಬರ್ಗ ವಿಶ್ವವಿದ್ಯಾಲಯದ 29ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದಕ ಸ್ವೀಕರಿಸಲಿದ್ದಾರೆ. ಇವರ ಪೈಕಿ 12 ವಿದ್ಯಾರ್ಥಿನಿಯರು ಹಾಗೂ ಐವರು ವಿದ್ಯಾರ್ಥಿಗಳು ಪದಕ ಸ್ವೀಕರಿಸುವರು. ದೊಡ್ಡಪ್ಪ ಅಪ್ಪ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿನಿ ರೂಪಾಶ್ರೀ ಚನ್ನಬಸಪ್ಪ ವಾಲಿ ಅವರು ಒಟ್ಟು 8 ಚಿನ್ನದ ಪದಕ ಗಳಿಸಿ, ಅಗ್ರ ಸ್ಥಾನದಲ್ಲಿ ಇದ್ದಾರೆ. ರಾಧಿಕಾ ಮಲ್ಲೇಶಪ್ಪ ಪೂಜಾರಿ (ಎಂಸಿಎ), ಬೀ ಬೀ ಅಸಮಾ (ಎಂಎಸ್‌ಸಿ ಗಣಿತ) ಹಾಗೂ ಶ್ವೇತಾ ಕನಕರಾಯ ಪಾಟೀಲ (ಎಲ್‌ಎಲ್‌ಬಿ) ತಲಾ ಆರು ಪದಕ ಪಡೆಯಲಿದ್ದಾರೆ. ಉಳಿದಂತೆ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ವಿವರ ಹೀಗಿದೆ:ರಾಧಿಕಾ ಮಲ್ಲೇಶಪ್ಪ ಪೂಜಾರಿ-ಎಂ.ಸಿ.ಎ., ಬೀ ಬೀ ಅಸಮಾ-ಎಂ.ಎಸ್ಸಿ.(ಗಣಿತ), ಶ್ವೇತಾ ಎಚ್. ಕನಕರಾಯಾ ಪಾಟೀಲ್ ಎಚ್.-ಎಲ್.ಎಲ್.ಬಿ. ತಲಾ 6 ಚಿನ್ನದ ಪದಕ; ನವೀದ್ ಪಾಶಾ- ಎಂ.ಎಸ್ಸಿ. ಸೂಕ್ಷ್ಮ ಜೀವಶಾಸ್ತ್ರ, ವಿಶ್ವೇಶ್ವರ ರಿಗೊಡೆ ಶ್ರೀಶೈಲಂ- ಎಂ.ಎಸ್ಸಿ. ಜೀವ ರಸಾಯನ ಶಾಸ್ತ್ರ ತಲಾ 5 ಚಿನ್ನದ ಪದಕ; ಎಂ.ಎಸ್. ಉಮಾಮಹೇಶ್ವರಿ- ಎಂ.ಎಸ್ಸಿ. ಭೌತಶಾಸ್ತ್ರ, ರೇಣುಕಾ ಶರಣಪ್ಪ ಎಂ.ಎ. ರಾಜ್ಯಶಾಸ್ತ್ರ, ಸವಿತಾ ಬಸವರಾಜ ಬಿ.ಎ. ತಲಾ 4 ಚಿನ್ನದ ಪದಕ; ಎಂ.ಎಸ್‌ಸಿಯ ವಿವಿಧ ವಿಭಾಗಗಳಲ್ಲಿ ಓದಿದ ಬಿನು ಕೆ., ಅಮಜದ್ ಬಿಎಲ್ ಲಿಯಾಖತ್ ಅಲಿ, ದತ್ತಾತ್ರಿ ಗೋಂದರಾವ ಪಾಟೀಲ್, ಸುನಿತಾ ಆರ್.ಎಂ., ವಂದನಾ ಬಲವಂತಾಚಾರ್ಯ ಜಹಾಗಿರದಾರ ತಲಾ 3 ಚಿನ್ನದ ಪದಕ ಗಳಿಸಿದ್ದಾರೆ. ಇದಲ್ಲದೆ ಶ್ವೇತಾ ಎನ್. ನಿಜಲಿಂಗಪ್ಪ ಎನ್.- ಎಂ.ಎಸ್.ಡಬ್ಲ್ಯೂ., ಸೌಮ್ಯ ರಾಮಕೃಷ್ಣ- ಎಂ.ಎ. ಸಂಗೀತ ಹಾಡುಗಾರಿಕೆ, ಫರೀದಾ ಬೇಗಂ ಸೈಯ್ಯದ್ ಯೂನುಸ್ ಅಲಿ- ಎಂ.ಎ. ಇತಿಹಾಸ ಸಹ ತಲಾ 3 ಬಂಗಾರದ ಪದಕ ಪಡೆದಿದ್ದಾರೆ.ಈ ಘಟಿಕೋತ್ಸವದಲ್ಲಿ 94 ಪುರುಷರು ಮತ್ತು 39 ಮಹಿಳೆಯರು ಸೇರಿದಂತೆ ವಿವಿಧ ವಿಷಯಗಳಲ್ಲಿ ಸಂಶೋಧನೆ ಮಾಡಿದ ಒಟ್ಟು 133 ವಿದ್ಯಾರ್ಥಿಗಳಿಗೆ ಪಿ.ಎಚ್‌ಡಿ., 120 ವಿದ್ಯಾರ್ಥಿಗಳಿಗೆ ಎಂ.ಫಿಲ್., 2560 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ, 146 ವಿದ್ಯಾರ್ಥಿಗಳಿಗೆ ಪಿ.ಜಿ. ಡಿಪ್ಲೊಮಾ, 5477 ಕಲಾ ವಿದ್ಯಾರ್ಥಿಗಳಿಗೆ, 2824 ವಿಜ್ಞಾನ ವಿದ್ಯಾರ್ಥಿಗಳಿಗೆ, 3727 ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ, 6119 ಶಿಕ್ಷಣ, 494 ಕಾನೂನು ಮತ್ತು 7 ವೈದ್ಯಕೀಯ ಒಳಗೊಂಡು ಒಟ್ಟು 21,607 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.ಇದಲ್ಲದೆ ವಿವಿಧ ಪದವಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ 142 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು 13 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು. ಬಾರದ ಕಸ್ತೂರಿರಂಗನ್: ಈ ಮೊದಲು ಖ್ಯಾತ ವಿಜ್ಞಾನಿ, ರಾಜ್ಯ ಜ್ಞಾನ ಆಯೋಗದ ಅಧ್ಯಕ್ಷ ಡಾ. ಕೆ.ಕಸ್ತೂರಿರಂಗನ್ ಅವರು ಘಟಿಕೋತ್ಸವ ಭಾಷಣ ಮಾಡಲು ಒಪ್ಪಿದ್ದರು. ಆದರೆ, ಅನಾರೋಗ್ಯದಿಂದಾಗಿ ಈಗ ಬರಲಾಗುತ್ತಿಲ್ಲ. ಹೀಗಾಗಿ ಅವರ ಬದಲಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ದೇಶಕ ಡಾ. ಟಿ.ಕೆ.ಅಲೆಕ್ಸ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಪ್ರೊ. ಪುಟ್ಟಯ್ಯ ತಿಳಿಸಿದರು. ಸಂಪುಟ ಸಭೆ ಇರುವುದರಿಂದ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ಸಹ ಬರುತ್ತಿಲ್ಲ. ರಾಜ್ಯಪಾಲ ಭಾರದ್ವಾಜ ಬರುವ ಆಶಾಭಾವನೆ ಇದೆ ಎಂದು ಹೇಳಿದರು.ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್.ಎಲ್. ಹಿರೇಮಠ ಮತ್ತು ಡಾ. ಡಿ.ಬಿ.ನಾಯಕ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry