ಬುಧವಾರ, ಮೇ 25, 2022
31 °C

ನೂತನ ಬಾಳಿಗೆ ಕಾಲಿರಿಸಿದ 16 ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಕನೂರು: ನೂತನ ಬಾಳಿಗೆ ಕಾಲಿರಿಸಿದ ನವ ದಂಪತಿಗಳು ಸುಸಂಸ್ಕೃತ ಸಮಾಜ ಕಟ್ಟಲು ಸಂಕಲ್ಪ ಮಾಡಬೇಕೆಂದು ಸಮಾಜ ಚಿಂತಕ ಹಾಗೂ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಹೇಳಿದರು. ಇಲ್ಲಿಯ ಮುಸ್ಲಿಂ ಅಂಜುಮನ್ ಕಮಿಟಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮುಸ್ಲಿಂರ ಸಾಮೂಹಿಕ ವಿವಾಹ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.ಜೀವನದುದ್ದಕ್ಕೂ ನಡೆ-ನುಡಿ, ಆಚಾರ-ವಿಚಾರ, ಸ್ವಾಭಿಮಾನಿ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಮುಸ್ಲಿಂರು ಕಷ್ಟ ಜೀವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮ ದಿನನಿತ್ಯ ಜಂಜಾಟದ ಮಧ್ಯೆಯೇ ತಮ್ಮ ಮಕ್ಕಳಿಗೆ ಪ್ರಾಥಮಿಕ ಶಾಲೆಯಿಂದ ಗುಣಮಟ್ಟದ ಶಿಕ್ಷಣ ಕೊಡಿಸಲು ಆಸಕ್ತಿ ವಹಿಸಬೇಕೆಂದು ಅವರು ಕರೆ ನೀಡಿದರು. ಉದ್ಯಮಿ ಸತ್ಯನಾರಾಯಣ ಹರಪನಹಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎಚ್.ಪೊಲೀಸ್ ಪಾಟೀಲ, ಹಾಲಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಇಂಥ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮುಸ್ಲಿಂರ  ಕಾರ್ಯ ಶ್ಲಾಘನೀಯ. ಸಾಮೂಹಿಕ ವಿವಾಹದಿಂದ ಬಡ ಕುಟುಂಬವನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಿದ್ದಲ್ಲದೇ, ಅನಗತ್ಯವಾಗಿ ಆಗುತ್ತಿರುವ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತಾಗಿದೆ ಎಂದರು.ನೂತನ ಬಾಳಿಗೆ ಕಾಲಿರಿಸಿದ 16 ಜೋಡಿ ನವ ದಂಪತಿಗಳನ್ನು ಬೆದವಟ್ಟಿ ಶಿವಸಂಗಮೇಶ್ವರ ಸ್ವಾಮೀಜಿ, ಖತೀಬ್ ಇಮಾಮ್ ಮಸ್ಜೀದೆ ಯುಸುಫೀಯಾ ಸೇರಿದಂತೆ ಮುಸ್ಲಿಂ ಹಾಗೂ ವಿವಿಧ ಸಮಾಜದ ಗಣ್ಯರು ಆಶೀರ್ವದಿಸಿ ಶುಭ ಕೋರಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಈರಪ್ಪ ಕುಡಗುಂಟಿ, ಶ್ಯಾಮೀದ್‌ಸಾಬ ಚಳ್ಳಾರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶೇಖರಪ್ಪ ವಾರದ, ರೇಣುಕಾ ಬೆದವಟ್ಟಿ, ಅತ್ಯುತ್ತಮ ಪೊಲೀಸ್ ಪೇದೆ ಪ್ರಶಸ್ತಿ ಪಡೆದ ನಸೀರಅಹ್ಮದ್ ಖಾಜಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.ಗುರುಲಿಂಗಯ್ಯ ಹಿರೇಮಠ, ಗೌಸುದ್ದೀನ್‌ಸಾಬ ಬನ್ನಿಕಟ್ಟಿ, ಶಿವಕುಮಾರ ಗುಳಗಣ್ಣವರ, ಸಿಪಿಐ ಬಸವರಾಜ ಭಜಂತ್ರಿ, ದಾವಲಸಾಬ ಕುದರಿ, ದ್ಯಾಮಣ್ಣ ಜಮಖಂಡಿ, ಸುಭಾಷ ತಾಲೇಡಾ, ಶಂಭು ಜೋಳದ, ರಾಮಣ್ಣ ಬಂಕದಮನಿ, ಈರಪ್ಪ ಭಂಡಾರಿ, ಕಾಶೀಮಸಾಬ ಮಾಟಲದಿನ್ನಿ, ರಸೂಲಸಾಬ ದಮ್ಮೂರ, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ ನಾಗಲಾಪುರಮಠ, ಸಿದ್ದಯ್ಯ ಕಳ್ಳಿಮಠ ಮತ್ತಿತರರು ವೇದಿಕೆಯಲ್ಲಿ ಇದ್ದರು. ಕಾಶೀಮಸಾಬ ತಳಕಲ್, ಅಬ್ದುಲ್‌ಸಾಬ ತಳಕಲ್, ಮುಸ್ಲಿಂ ಅಂಜುಮನ್ ಕಮಿಟಿಯ ರಸೀದಸಾಬ ಮುಬಾರಕ್, ಮೌಲಾಸಾಬ ಮಂಗಳಾಪುರ, ಡಾ.ದೂಲಿನಾಯಕ್, ಇಕ್ಬಾಲ್‌ಮೇಸ್ತ್ರಿ ಲಕ್ಕುಂಡಿ, ಮಹ್ಮದ ಇಸಾಕ್ ದೇವದುರ್ಗ, ಮಹ್ಮದರಫಿ ಹಿರೇಹಾಳ, ರಹಿಮಾನಸಾಬ ಮಕ್ಕಪ್ಪನವರ, ಅಬ್ದುಲ್‌ರಸೀದ ಹಣಜಗೇರಿ ಮತ್ತಿತರರು ಸಮಾರಂಭದ ಯಶಸ್ವಿಗೆ ಶ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.