ಶನಿವಾರ, ಅಕ್ಟೋಬರ್ 19, 2019
28 °C

ಬನ್ಸಾಲಿ ಸಿನಿಮಾದಲ್ಲಿ ಆಲಿಯಾ, ಕಾರ್ತಿಕ್‌ ಜೋಡಿ

Published:
Updated:

ಸಂಜಯ್‌ಲೀಲಾ ಬನ್ಸಾಲಿಯ ‘ಗಂಗೂಬಾಯಿ’ ಸಿನಿಮಾದಲ್ಲಿ ಆಲಿಯಾ ಭಟ್‌ ಅವರೊಂದಿಗೆ ಕಾರ್ತಿಕ್‌ ಆರ್ಯನ್‌ ನಟಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ವಲಯದಲ್ಲಿ ಕೇಳಿಬರುತ್ತಿದೆ.

‘ಇನ್‌ಶಾ ಅಲ್ಲಾಹ್‌’ ಸಿನಿಮಾದಲ್ಲಿ ಆಲಿಯಾಭಟ್ ಹಾಗೂ ಸಲ್ಮಾನ್‌ ಖಾನ್ ನಟಿಸಬೇಕಿತ್ತು. ಆದರೆ ಈ ಸಿನಿಮಾ ಸೆಟ್ಟೇರುತ್ತಿಲ್ಲ ಎಂದು ಇತ್ತೀಚೆಗಷ್ಟೇ ಪ್ರಕಟಿಸಲಾಗಿತ್ತು. ಇನ್ನೊಂದು ಸಿನಿಮಾವನ್ನು ಸದ್ಯದಲ್ಲಿಯೇ ಆಲಿಯಾ ಭಟ್ ಜೊತೆಗೆ ಮಾಡುವುದಾಗಿ ಬನ್ಸಾಲಿ ಹೇಳಿದ್ದರು. ಅದರಂತೆಯೇ ‘ಗಂಗೂಬಾಯಿ’ಯಲ್ಲಿ ಆಲಿಯಾ ನಟಿಸಲಿದ್ದಾರೆ.

ಆಲಿಯಾಗೆ ನಾಯಕ ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕಾರ್ತಿಕ್‌ ಆರ್ಯನ್‌ ಈ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹಬ್ಬಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು, ‘ನಾನು ಈ ಸಿನಿಮಾ ನಿರಾಕರಿಸಿದ್ದೇನೆ ಎಂಬುದು ಸುಳ್ಳು ಸುದ್ದಿ’ ಎಂದು ಕಾರ್ತಿಕ್‌ ಹೇಳಿದ್ದಾರೆ.  ನಟಿಸುತ್ತಿರುವುದಾಗಿಯೂ ಕಾರ್ತಿಕ್‌ ಎಲ್ಲಿಯೂ ಹೇಳಿಲ್ಲ.

ಸಿನಿ ತಂಡದ ಪ್ರಕಾರ ಕಾರ್ತಿಕ್‌, ಒಟ್ಟಿಗೆ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ. ಡೇಟ್ಸ್ ಹೊಂದಾಣಿಕೆ ಯಾಗುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಬನ್ಸಾಲಿ ಹೌಸ್‌ನಲ್ಲಿ ಕಾರ್ತಿಕ್‌ ಕಾಣಿಸಿಕೊಂಡಿದ್ದರು. ಆಗ ‘ಗಂಗೂಬಾಯಿ’ ಸಿನಿಮಾದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಅವರು ಸ್ಕ್ರಿಪ್ಟ್‌ ಕೂಡ ಓದಿದ್ದಾರಂತೆ.

ಹುಸೇನ್‌ ಜೈದಿ ಅವರ ‘ಮಾಫಿಯಾ ಕ್ಷೀನ್ಸ್‌ ಆಫ್‌ ಮುಂಬೈ’ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ‘ಗಂಗೂಬಾಯಿ’ ಸಿನಿಮಾದ ಸ್ಕ್ರಿಪ್ಟ್ ಸಿದ್ಧಗೊಂಡಿದೆ. ಗಂಗೂಬಾಯಿ ಕೊಟೇವಾಲಿ ಮೂಲತಃ ಮುಂಬೈನ ರೆಡ್‌ ಲೈಟ್ ಏರಿಯಾದಲ್ಲಿ ನೆಲೆಸಿದ್ದವರು.

Post Comments (+)