ಸೋಮವಾರ, ಅಕ್ಟೋಬರ್ 21, 2019
23 °C

ಸದ್ಯದಲ್ಲೇ ಸೆಟ್ಟೇರಲಿದೆ ಕ್ರಿಶ್‌ 4

Published:
Updated:

ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿರುವ ರಾಕೇಶ್‌ ರೋಶನ್‌ ‘ಕ್ರಿಶ್‌ 4’ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ಸ್ಕ್ರಿಪ್ಟಿಂಗ್ ಕೆಲಸ ಪೂರ್ಣಗೊಳಿಸುತ್ತಿರುವುದಾಗಿ ಹೇಳಿದ್ದಾರೆ. 2019ರಲ್ಲಿಯೇ ‘ಕ್ರಿಶ್‌ 4’ ಬಿಡುಗಡೆಯಾಗಲಿದೆ ಎಂದು ಈ ಮೊದಲು ಪ್ರಕಟಿಸಲಾಗಿತ್ತು. ಅಷ್ಟರಲ್ಲಿ ಕ್ಯಾನ್ಸರ್‌ನಿಂದ ಬಳಲಿದ್ದ ಅವರು, 2020ರ ಕ್ರಿಸ್‌ಮಸ್‌ಗೆ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

‘ಮೊದಲ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾಯಿತು. ಇದರಿಂದಾಗಿ ಶಸ್ತ್ರಚಿಕಿತ್ಸೆ ಬಳಿಕ ತಂದೆ ಗುಣಮುಖರಾಗುತ್ತಿದ್ದಾರೆ. ಹೆಚ್ಚು ವಿಶ್ರಾಂತಿಯ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯ ಸ್ಕ್ರಿಪ್ಟಿಂಗ್ ಕೆಲಸಕ್ಕೆ ಎಲ್ಲರೂ ನೆರವಾಗುತ್ತಿದ್ದೇವೆ’ ಎಂದು ಹೃತಿಕ್‌ ರೋಷನ್ ಹೇಳಿದ್ದಾರೆ.

ಮೊದಲ ಮೂರು ಅವತರಣಿಕೆಗಿಂತ ವಿಭಿನ್ನವಾಗಿ ಈ ಸಿನಿಮಾದ ಕತೆ ಹಾಗೂ ದೃಶ್ಯಗಳನ್ನು ಹೆಣೆಯುವ ಯೋಜನೆಯನ್ನು ಸಿನಿಮಾ ತಂಡ ಹೊಂದಿದೆ. ಈ ಸಿನಿಮಾದಲ್ಲಿ ಇಬ್ಬರಿಗಿಂತ ಹೆಚ್ಚು ಖಳನಾಯಕರು ಇರಲಿದ್ದಾರೆ. ಬಜೆಟ್ ಕೂಡ ಹೆಚ್ಚಿಸಿಕೊಳ್ಳಲಾಗಿದೆ. ‘ಕಾಬಿಲ್‌’ ಸಿನಿಮಾವನ್ನು ನಿರ್ದೇಶಿಸಿದ್ದ ಸಂಜಯ್ ಗುಪ್ತಾ ಅವರೇ ಈ ಸಿನಿಮಾದಲ್ಲೂ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ.

ಕೃತಿ ಕರಬಂದ ಈ ಸಿನಿಮಾದಲ್ಲಿ ಹೃತಿಕ್‌ಗೆ ನಾಯಕಿಯಾಗುವ ಸಾಧ್ಯತೆ ಹೆಚ್ಚಿದೆ.

Post Comments (+)