ಗುರುವಾರ , ಅಕ್ಟೋಬರ್ 17, 2019
22 °C

ಹಾಲಿವುಡ್‌ ಸಿನಿಮಾದಲ್ಲಿ ಐಶ್ವರ್ಯಾ ಖಳ ನಾಯಕಿ !

Published:
Updated:

‘ಮಾಲಫಿಸೆಂಟ್‌ ಮಿಸ್ಟ್ರೆಸ್‌ ಆಫ್‌ ಎವಿಲ್‌’ ಹಾಲಿವುಡ್‌ ಸಿನಿಮಾದ ಹಿಂದಿ ಅವತರಣಿಕೆಯಲ್ಲಿ ಐಶ್ವರ್ಯಾ ರೈ ನಟಿಸಿದ್ದಾರೆ. ಇನ್‌ಸ್ಟಾಗ್ರಾಂ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಪ್ರೊಮೊ ಹಂಚಿಕೊಂಡಿದ್ದಾರೆ.

‘ಏಂಜೆಲಿನಾ ಜೂಲಿ ಅಭಿನಯದ ಸಿನಿಮಾದಲ್ಲಿ ನಟಿಸುವ ಮೂಲಕ ಡಿಸ್ನಿ ಫ್ಯಾಮಿಲಿಗೆ ಸೇರಿದ್ದೇನೆ, ಖುಷಿಯಾಗುತ್ತಿದೆ’ ಎಂದು ಬರೆದುಕೊಂಡಿರುವ ಐಶ್ವರ್ಯಾ ತಮ್ಮ ಹೊಸ ಸಿನಿಮಾದ ಪೋಸ್ಟರ್‌ ಹಾಗೂ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಖಳನಾಯಕಿಯ ಪಾತ್ರದಲ್ಲಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ತಮ್ಮದೇ ಧ್ವನಿಯನ್ನೂ ನೀಡಿದ್ದಾರೆ.

ಐಶ್ವರ್ಯಾ ಅವರ ಹೊಸ ಅವತಾರವನ್ನು ಕೆಲವರು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವು ಅಭಿಮಾನಿಗಳು, ಈ ರೀತಿ ಭಯಪಡಿಸುವ ಪಾತ್ರವೊಂದರಲ್ಲಿ ಐಶ್ವರ್ಯಾ ನಟಿಸಬಾರದಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಚಪ್ಪಾಳೆ ತಟ್ಟುತ್ತಿರುವ ಎಮೋಜಿಯೊಂದನ್ನು ಪತಿ ಅಭಿಷೇಕ್‌ ಬಚ್ಚನ್‌ ಹಾಕಿದ್ದಾರೆ. 

ಕಪ್ಪು ಬಟ್ಟೆಯಲ್ಲಿ ಕೆಂಗಣ್ಣು ಬೀರುತ್ತಿರುವ 45 ವರ್ಷದ ಬೆಕ್ಕಿನ ಕಂಗಳ ಚೆಲುವೆ ಐಶ್ಚರ್ಯಾ ವಿಕಟ ಅವತಾರದ ಚಿತ್ರಗಳು ಗಮನ ಸೆಳೆಯುತ್ತವೆ. ಆಕರ್ಷಕ ಕೇಶ ವಿನ್ಯಾಸದ ಬಗ್ಗೆಯೂ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಜೋಚಿಮ್‌ ರಾನಿಂಗ್‌ ನಿರ್ದೇಶನದ ಈ ಚಿತ್ರದಲ್ಲಿ ಎಲ್‌, ಮೈಕಲ್‌ ಪಫರ್, ಹಾಲಿವುಡ್‌ನ ದೊಡ್ಡ ತಾರಾಬಳಗವೇ ಇದೆ.

ಇದನ್ನೂ ಓದಿ: ‘ಪೊನ್ನಿಯಿನ್‌ ಸೆಲ್ವನ್‌’ನಲ್ಲಿ ಐಶ್ವರ್ಯಾ ದ್ವಿಪಾತ್ರದಲ್ಲಿ ನಟನೆ

Post Comments (+)