ಬುಧವಾರ, ಅಕ್ಟೋಬರ್ 16, 2019
22 °C

ದುಲ್ಕರ್ ಈಗ ಪೊಲೀಸ್ ಅಧಿಕಾರಿ

Published:
Updated:

ಮಾಲಿವುಡ್‌ ನಟ ದುಲ್ಕರ್ ಸಲ್ಮಾನ್‌ ಅವರು ರೋಷನ್‌ ಆ್ಯಂಡ್ರ್ಯೂ ಅವರ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಬಾಬಿ ಸಂಜಯ್‌ ಅವರ ಸ್ಕ್ರಿಪ್ಟ್‌ ಆಧರಿಸಿ ಚಿತ್ರಕಥೆ ಸಿದ್ಧಗೊಂಡಿದೆ. 2020ರ ಮಾರ್ಚ್‌ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಸದ್ಯದಲ್ಲಿ ರೋಷನ್‌ ಅವರು, ಮಂಜು ವಾರಿಯರ್‌ ಅಭಿನಯದ ‘ಪ್ರದಿ ಪೂವಂಗೋಳಿ’‌ ಸಿನಿಮಾ ನಿರ್ದೇಶಿಸಿದ್ದಾರೆ.

ದುಲ್ಕರ್ ಸಲ್ಮಾನ್‌ ‘ಕುರುಪ್‌’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ನಿರ್ಮಾಣವನ್ನು ಕೂಡ ದುಲ್ಕರ್ ಅವರೇ ಮಾಡಿದ್ದಾರೆ.

Post Comments (+)