ಸೋಮವಾರ, ಅಕ್ಟೋಬರ್ 14, 2019
29 °C

ಷಟರ್ ಮುರಿದು ₹ 12 ಲಕ್ಷ ಕಳವು

Published:
Updated:
Prajavani

ಉಡುಪಿ: ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಇರುವ ಮೈತ್ರಿ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿರುವ ರಮಾ ಎಂಟರ್‌ಪ್ರೈಸಸ್‌ ಎಂಬ ಅಂಗಡಿಯ ಷಟರ್‌ ಮುರಿದು ₹ 12 ಲಕ್ಷ ರೂಪಾಯಿ ದೋಚಲಾಗಿದೆ.

ವಿಠಲ್‌ ನಾಯಕ್‌ ಅವರಿಗೆ ಸೇರಿದ ದಿನಬಳಕೆ ವಸ್ತುಗಳ ಮಾರಾಟ ಅಂಗಡಿಯಲ್ಲಿ ಕಳವು ನಡೆದಿದೆ. ಅ.5ರಿಂದ 8ರವರೆಗೂ ಬ್ಯಾಂಕ್‌ಗಳಿಗೆ ರಜೆ ಇದ್ದ ಕಾರಣ ವಿಠಲ್‌ ನಾಯಕ್ ಅವರು ವ್ಯವಹಾರದ ಹಣವನ್ನೆಲ್ಲ ಅಂಗಡಿಯ ಟೇಬಲಿನ ಡ್ರಾವರ್‌ನಲ್ಲಿಟ್ಟು ಅ.8ರಂದು ಅಂಗಡಿಯ ಬಾಗಿಲು ಹಾಕಿಕೊಂಡು ಮನಗೆ ಹೋಗಿದ್ದರು. 

ಅ.9ರಂದು ಬೆಳಿಗ್ಗೆ ಅಂಗಡಿಗೆ ಬಂದಾಗ ಕಳುವಾಗಿರುವುದು ಗೊತ್ತಾಗಿದೆ. ಕಬ್ಬಿಣದ ರಾಡಿನಿಂದ ಷಟರ್‌ ಮೀಟಿ ಒಳನುಗ್ಗಿದ ಕಳ್ಳರು, ಡ್ರಾವರ್‌ನಲ್ಲಿ ಇಟ್ಟಿದ್ದ ಹಣವನ್ನು ಕದ್ದೊಯ್ದಿದ್ದಾರೆ.

ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎನ್ನಲಾಗಿದೆ. ಪರಿಚಿತರೇ ಕಳವು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಂಗಡಿಯ ಸುತ್ತಮುತ್ತಲು ಇರುವ ಅಂಗಡಿ ಮಳಿಗೆಗಳಿಗೆ ಹಾಕಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

Post Comments (+)