ಗುರುವಾರ , ಅಕ್ಟೋಬರ್ 17, 2019
21 °C

ದೀರ್ಘಾವಧಿ ಮುಂಗಾರು ಋತು

Published:
Updated:

ನವದೆಹಲಿ: ಪ್ರಸಕ್ತ ವರ್ಷದ ನೈರುತ್ಯ ಮುಂಗಾರು ಋತುವನ್ನು ದೀರ್ಘಾವಧಿ ಮುಂಗಾರು ಎನ್ನಲಾಗುತ್ತಿದೆ. ಕಾರಣ ಅದು ಒಂದು ತಿಂಗಳು ತಡವಾಗಿ ಮುಗಿಯುತ್ತಿದೆ. ವಾಡಿಕೆಯಂತೆ ಮೂರು ತಿಂಗಳು ಬರುವ ಮುಂಗಾರು ಮಳೆ, ಈ ವರ್ಷ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬಂದಿರುವುದು ದಾಖಲೆ ಎಂದು ಭಾರತೀಯ ಹವಾಮಾನ (ಐಎಂಡಿ) ಇಲಾಖೆ ತಿಳಿಸಿದೆ.

ಪಂಜಾಬ್, ಹರಿಯಾಣ ಮತ್ತು ಉತ್ತರ ರಾಜಸ್ಥಾನದ ಕೆಲ ಭಾಗಗಳಲ್ಲಿ ನೈರುತ್ಯ ಮುಂಗಾರು ಋತು ಬುಧವಾರ ಕೊನೆಯಾಗಿದೆ. ವಾಡಿಕೆಯಂತೆ ಸೆಪ್ಟೆಂಬರ್‌ 1ಕ್ಕೆ ಈ ಭಾಗದಲ್ಲಿ ಮುಂಗಾರು ಅವಧಿ ಮುಗಿಯಬೇಕಿತ್ತು ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.  

ದೇಶವು 1961ರಲ್ಲಿ ದೀರ್ಘಾವಧಿ ಮುಂಗಾರು ಋತುವನ್ನು ಕಂಡಿತ್ತು. ಆಗ ಅಕ್ಟೋಬರ್‌ 1ರವರೆಗೂ ಮುಂಗಾರು ಮಳೆ ಸುರಿದಿತ್ತು. ಬಳಿಕ 2007ರಲ್ಲಿ ಸೆಪ್ಟೆಂಬರ್‌ 30ರವರೆಗೂ ಈ ಮುಂಗಾರು ಋತು ಇತ್ತು ಎಂದಿದೆ.

Post Comments (+)