ಗುರುವಾರ , ಅಕ್ಟೋಬರ್ 17, 2019
22 °C

ರಖಾದಲ್ಲಿ ಐಎಸ್‌ ದಾಳಿ

Published:
Updated:

ಬೈರೂತ್‌: ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಸಿರಿಯಾದ ರಖಾ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ರಾತ್ರೋರಾತ್ರಿ ಬಂದೂಕು, ಗ್ರೆನೇಡ್‌ ಮತ್ತು ಸ್ಫೋಟಕಗಳನ್ನು ಸಿಡಿಸಿ ಈ ದಾಳಿ ನಡೆಸಲಾಗಿದೆ. ಉಗ್ರರು ಮತ್ತು ಕುರ್ದಿಶ್‌ ನೇತೃತ್ವದ ಸಿರಿಯಾ ಡೆಮಾಕ್ರೆಟಿಕ್‌ ಪಡೆ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಕದನ ನಡೆಯಿತು. ಯಾವುದೇ ಸಾವುನೋವು ಸಂಭವಿಸಿರುವ ವರದಿ ಆಗಿಲ್ಲ.

ಈ ದಾಳಿಯಿಂದ ಕುರ್ದಿಶ್‌ ಪ್ರದೇಶಗಳಲ್ಲಿ ಜಿಹಾದಿಗಳ ಹಾವಳಿ ಹೆಚ್ಚಾಗುವ ಆತಂಕ ಎದುರಾಗಿದೆ. 

 

Post Comments (+)