ಸೋಮವಾರ, ಅಕ್ಟೋಬರ್ 14, 2019
24 °C

ನಾಳೆಯಿಂದ ‘ಬೆಂಗಳೂರು ಉತ್ಸವ’

Published:
Updated:
Prajavani

ಬೆಂಗಳೂರು: ದೀಪಾವಳಿ ಹಬ್ಬದ ಅಂಗವಾಗಿ ಇದೇ 11ರಿಂದ 20ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ದೀಪಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ‘ಬೆಂಗಳೂರು ಉತ್ಸವ’ವನ್ನು ಆಯೋಜಿಸಲಾಗಿದೆ.

ಗ್ರ್ಯಾಂಡ್‌ ಫ್ಲಿಯಾ ಮಾರ್ಕೆಟ್‌ ವತಿಯಿಂದ ಹಮ್ಮಿಕೊಂಡ ಈ ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ದೇಶದ ವಿವಿಧ ಭಾಗದ ಕರಕುಶಲಕಾರರು ತಯಾರಿಸಿದ ಮಣ್ಣಿನ ದೀಪಗಳು, ಲೋಹದ ದೀಪಗಳು, ತರಹೇವಾರಿ ದೀಪಗಳು, ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು, ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು, ಮನೆಯ ಆಲಂಕಾರಿಕ ವಸ್ತುಗಳು, ಆಭರಣಗಳು, ಕಲಾಕೃತಿಗಳು, ಪಿಂಗಾಣಿ ವಸ್ತುಗಳು ಉತ್ಸವದಲ್ಲಿ ಲಭ್ಯ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

 

Post Comments (+)