ಗುರುವಾರ , ಅಕ್ಟೋಬರ್ 17, 2019
21 °C

‘ಕಿತ್ತೂರು ಕರ್ನಾಟಕ’ ಹೊರಟ್ಟಿ ಗಡುವು

Published:
Updated:

ಹುಬ್ಬಳ್ಳಿ:  ಮುಂಬೈ ಕರ್ನಾಟಕ ಪ್ರದೇಶವನ್ನು ಅ.23ರಂದು ಆರಂಭವಾಗಲಿರುವ ಕಿತ್ತೂರು ಉತ್ಸವಕ್ಕೂ ಮುನ್ನ ಅಥವಾ ಉತ್ಸವದಲ್ಲಿಯೇ ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ಹೈದರಾಬಾದ್‌–ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದ ನಿಮ್ಮ ಕಾರ್ಯ ಚಿರಸ್ಮರಣೀಯ. ಅದೇ ರೀತಿ ಮುಂಬೈ ಕರ್ನಾಟಕ ಕಿತ್ತೂರು ಕರ್ನಾಟಕ ಆಗಬೇಕು ಎಂಬುದು ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಠಾಧೀಶರ ಒತ್ತಾಸೆಯಾಗಿದೆ‌’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Post Comments (+)