ಬುಧವಾರ, ಅಕ್ಟೋಬರ್ 16, 2019
28 °C

ದೀಪಾವಳಿಗಾಗಿ ಮೈಸೂರು–ವಿಜಯಪುರ ನಡುವೆ ‘ಸುವಿಧಾ’ ವಿಶೇಷ ರೈಲು

Published:
Updated:

ಹುಬ್ಬಳ್ಳಿ: ದೀ‍ಪಾವಳಿ ಪ್ರಯುಕ್ತ ಅ.25ರಂದು ಮೈಸೂರು–ವಿಜಯಪುರ ನಡುವೆ ಸುವಿಧಾ ವಿಶೇಷ ರೈಲು ಸಂಚರಿಸಲಿದೆ. ಅಂದು ಸಂಜೆ 4.45ಕ್ಕೆ ಮೈಸೂರಿನಿಂದ ಹೊರಟು ಮರುದಿನ ಬೆಳಿಗ್ಗೆ 10.30ಕ್ಕೆ ವಿಜಯಪುರ ತಲುಪಲಿದೆ.

ಮಂಡ್ಯ, ರಾಮನಗರ, ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ತೋರಣಗಲ್‌, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ಬಸವನಬಾಗೇವಾಡಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

 

Post Comments (+)