ಭಾನುವಾರ, ಅಕ್ಟೋಬರ್ 20, 2019
27 °C
ದೇಶಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ಕೇರಳದ ಬ್ಯಾಟ್ಸ್‌ಮನ್

ವಿಜಯ್ ಹಜಾರೆ ಟ್ರೋಫಿ: ಸಂಜು ಸ್ಯಾಮ್ನಸ್ ಅಬ್ಬರದ ದ್ವಿಶತಕ

Published:
Updated:
Prajavani

ಬೆಂಗಳೂರು: ಕೇರಳ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (ಔಟಾಗದೆ 212;129ಎಸೆತ, 21ಬೌಂಡರಿ, 10ಸಿಕ್ಸರ್) ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಮಿಂಚಿನ ದ್ವಿಶತಕ ದಾಖಲಿಸಿದರು.

ದೇಶಿ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ  ಸಂಜು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ಮಾಡಿದರು. ಅವರೊಂದಿಗೆ ಮೂರನೇ ವಿಕೆಟ್‌ಗೆ 338 ರನ್‌ ಸೇರಿಸಿದ ಸಚಿನ್‌ ಬೇಬಿ (127;135ಎಸೆತ 7ಬೌಂಡರಿ,4ಸಿಕ್ಸರ್) ಶತಕ ಬಾರಿಸಿದರು.

ಇವರಿಬ್ಬರ ಮಿಂಚಿನ ಬ್ಯಾಟಿಂಗ್‌ನಿಂದ ಕೇರಳ ತಂಡವು 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 377 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಗೋವಾ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 273 ರನ್‌ ಗಳಿಸಿತು. ರಾಬಿನ್ ಉತ್ತಪ್ಪ ನಾಯಕತ್ವದ ಕೇರಳ ತಂಡವು 104 ರನ್‌ಗಳಿಂದ ಜಯಿಸಿತು.

ಗೋವಾ ತಂಡದ  ಆದಿತ್ಯ ಕೌಶಿಕ್ (58 ರನ್) ಮತ್ತು ತನಿಶ್ ಸಾವಕರ್ (56 ರನ್) ಅರ್ಧಶತಕ ಬಾರಿಸಿದರು.

ಹೋದ ವರ್ಷದ ಟೂರ್ನಿಯಲ್ಲಿ ಉತ್ತರಾಖಂಡದ ಕರ್ಣವೀರ್ ಕೌಶಲ್ ಅವರು ಸಿಕ್ಕಿಂ ವಿರುದ್ಧ ದ್ವಿಶತಕ ಬಾರಿಸಿದ್ದರು. ವಿಜಯ್ ಹಜಾರೆ ಟೂರ್ನಿಯಲ್ಲಿ ಅದು ಮೊದಲ ದ್ವಿಶತಕದ ದಾಖಲೆಯಾಗಿತ್ತು. 

Post Comments (+)