ಸೋಮವಾರ, ಡಿಸೆಂಬರ್ 16, 2019
18 °C

ಇಂದು ಷೇರುಪೇಟೆಯಲ್ಲಿ ಐಆರ್‌ಸಿಟಿಸಿ ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರಿ ಒಡೆತನದ ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಷೇರುಗಳ ವಹಿವಾಟಿಗೆ ಸೋಮವಾರ ಚಾಲನೆ ಸಿಗಲಿದೆ.

ಷೇರುಗಳ ‘ಬಿ’ ಸಮೂಹದಲ್ಲಿ ‘ಐಆರ್‌ಸಿಟಿಸಿ‘ ಷೇರುಗಳು ವಹಿವಾಟು ನಡೆಸಲಿವೆ ಎಂದು ಮುಂಬೈ ಷೇರು‍ಪೇಟೆ ಪ್ರಕಟಣೆಯಲ್ಲಿ ತಿಳಿಸಿದೆ.

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ₹ 645 ಕೋಟಿ ಸಂಗ್ರಹಿಸಲಾಗಿದೆ. ₹10ರ ಮುಖಬೆಲೆಯ ₹ 2.01 ಕೋಟಿ ಷೇರುಗಳನ್ನು ಮಾರಾಟಕ್ಕೆ ಇಡಲಾಗಿತ್ತು. 

ಯೆಸ್‌ ಸೆಕ್ಯುರಿಟೀಸ್‌, ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಮತ್ತು ಐಡಿಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಆ್ಯಂಡ್‌ ಸೆಕ್ಯುರಿಟೀಸ್‌ ಈ ‘ಐಪಿಒ’ದ ನಿರ್ವಹಣೆ ಮಾಡಿವೆ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು