ಶನಿವಾರ, ನವೆಂಬರ್ 23, 2019
18 °C

ಐಎಚ್‌ಎಂಸಿಎಲ್ ಜಿಎಸ್‌ಟಿಎನ್‌ ಒಪ್ಪಂದ

Published:
Updated:

ನವದೆಹಲಿ: ಜಿಎಸ್‌ಟಿ ಇ–ವೇ ಬಿಲ್‌ನೊಂದಿಗೆ ಫಾಸ್ಟ್‌ಟ್ಯಾಗ್‌ ಅನ್ನು ಜೋಡಿಸುವ ಕುರಿತು ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ನಿಯಮಿತ (ಐಎಚ್‌ಎಂಸಿಎಲ್) ಮತ್ತು ಜಿಎಸ್‌ಟಿಎನ್‌ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.

ಜಿಎಸ್‌ಟಿ ಮಂಡಳಿಯು ಈಗಾಗಲೇ ಇದಕ್ಕೆ ಔಪಚಾರಿಕ ಸಮ್ಮತಿ ನೀಡಿದೆ. ಇದರಿಂದ ರೆವಿನ್ಯೂ ಇಲಾಖೆಗೆ ವಾಹನಗಳ ಮೇಲೆ ನಿಗಾ ಇಡಲು,
ಇ–ವೇ ಬಿಲ್‌ ಸೃಷ್ಟಿಸುವಾಗ ನೀಡಿರುವ ವಿಳಾಸಕ್ಕೆ ವಾಹನ ತಲುಪಲಿದೆಯೇ ಎನ್ನುವುದನ್ನೂ ಪತ್ತೆ ಮಾಡಲು ಸುಲಭವಾಗಲಿದೆ.

ಪ್ರತಿಕ್ರಿಯಿಸಿ (+)