ಸೋಮವಾರ, ನವೆಂಬರ್ 18, 2019
20 °C

ಆರೋಗ್ಯ ಸಹಾಯಕಿಯರ ಗೌರವಧನ ಹೆಚ್ಚಳ: ಭರವಸೆ

Published:
Updated:

ಮೊಳಕಾಲ್ಮುರು: ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್ಆರ್‌ಎಂ) ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾಫ್‌ನರ್ಸ್ ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದರು.

ಭಾನುವಾರ ಇಲ್ಲಿ ಜನರಿಕ್ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ’ಪ್ರಸ್ತುತ ₹10,500 ವೇತನ ನೀಡಲಾಗುತ್ತಿದೆ. ಅದನ್ನು ₹ 17,500 ಕ್ಕೆ ಏರಿಸಲಾಗುವುದು. ಈ ಬಗ್ಗೆ ಅಂಕಿ-ಅಂಶ ಸಂಗ್ರಹಿಸಲಾಗುತ್ತಿದ್ದು, ಪರಿಶೀಲಿಸಿ ಎರಡು ತಿಂಗಳ ಒಳಗಾಗಿ ನಿರ್ಧಾರ ಕೈಗೊಳ್ಳಲಾಗುವುದು‘ ಎಂದರು.

ಆಶಾ ಕಾರ್ಯಕರ್ತೆಯರ ಗೌರವಧನವನ್ನು ₹ 500 ಹೆಚ್ಚಳ ಮಾಡಿದ್ದು, ಮತ್ತೆ ₹ 500 ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)