ಭಾನುವಾರ, ನವೆಂಬರ್ 17, 2019
27 °C

‘ಟೈಂ ಕ್ಯಾಪ್ಸೂಲ್‌’- ನೂತನ ‘ಸ್ಪ್ರಿಂಗ್‌ ಸಮ್ಮರ್‌ 20’ ವಿನ್ಯಾಸ

Published:
Updated:

ಯುವ ಫ್ಯಾಷನ್‌ ಡಿಸೈನರ್‌ ಸಮೀರ್‌ ಮದನ್‌ ತಮ್ಮ ನೂತನ ‘ಸ್ಪ್ರಿಂಗ್‌ ಸಮ್ಮರ್‌ 20’ ವಿನ್ಯಾಸ ಸಂಗ್ರಹವನ್ನು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ‘ಲೋಟಸ್‌ ಮೇಕಪ್‌ ಇಂಡಿಯಾ ಫ್ಯಾಷನ್‌ ವೀಕ್‌’ನಲ್ಲಿ ಪ್ರದರ್ಶಿಸಿದರು. ಯುವ ಸಮುದಾಯಕ್ಕೆಂದೇ ರೂಪಿಸಿದ ಈ ವಸ್ತ್ರ ವಿನ್ಯಾಸಗಳಿಗೆ ಅವರು ‘ಟೈಂ ಕ್ಯಾಪ್ಸೂಲ್‌’ ಎಂದು ನಾಮಕರಣ ಮಾಡಿದ್ದಾರೆ. ‘ಹಳೆಯ ಬೇರು ಹೊಸ ಚಿಗುರು’ ಎನ್ನುವ ಭಾವವನ್ನು ಅವರು ತಮ್ಮ ವಿನ್ಯಾಸದಲ್ಲಿ ತುಂಬಿದ್ದಾರೆ. ಕಾಲ, ವಯೋಮಿತಿಯನ್ನು ಮೀರಿದ ಹಳತು ಮತ್ತು ಹೊಸತರ ಸಮ್ಮಿಳಿತ ಈ ಸಂಗ್ರಹದ ವಿಶೇಷವಾಗಿದೆ.

ಪ್ರತಿಕ್ರಿಯಿಸಿ (+)