ಬುಧವಾರ, ನವೆಂಬರ್ 13, 2019
17 °C

ಯಾದಗಿರಿಗೆ ಬಿಜೆಪಿ ರಾಜ್ಯಾಧ್ಯಕ್ಷ‌ ಕಟೀಲ್‌

Published:
Updated:
Prajavani

ಗುರುಮಠಕಲ್: ಈಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ನಳೀನಕುಮಾರ ಕಟೀಲ್‌ ಅವರು ಪಕ್ಷ ಸಂಘಟನೆಯ ಹಿನ್ನಲೆಯಲ್ಲಿ ಅ.16 ಬುಧವಾರ ಸಾಯಂಕಾಲ ಹೈದ್ರಾಬಾದ್‌ ಮಾರ್ಗವಾಗಿ ಯಾದಗಿರಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ತಿಳಿಸಿದರು.

ಬುಧವಾರ ರಾತ್ರಿ ಯಾದಗಿರಿ ನಗರದ ಸರ್ಕ್ಯೂಟ್‌ ಹೌಸ್‌ ನಲ್ಲಿ ವಾಸ್ತವ್ಯ ಮಾಡಲಿದ್ದಾರೆ, ಅ.17 ಗುರುವಾರದಂದು ರಂದು ಬೆ.10 ಕ್ಕೆ ಯಾದಗಿರಿ ಜಿಲ್ಲೆಯ ಬಿಜೆಪಿ ಕೋರ್‌ ಕಮೀಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ 11 ಗಂಟೆಗೆ ಶಕ್ತಿಕೇಂದ್ರ, ಮಂಡಲ ಕೇಂದ್ರಗಳು ಹಾಗೂ ಜಿಲ್ಲಾ ಘಟಕಗಳ ಪದಾಧಿಕಾರಿಗಳೊಡನೆ ಪಕ್ಷ ಸಂಘಟನೆಯ ಕುರಿತ ವರದಿ ಹಾಗೂ ಯೋಜನೆಯ ಕುರಿತು ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಹೇಳಿದರು.

ಯಾದಗಿರಿಯ ಸಭೆಯನ್ನು ಮುಗಿಸಿಕೊಂಡ ನಂತರ ರಾಯಚೂರು ಜಿಲ್ಲೆಗೆ ತೆರಳುತ್ತಾರೆ. ರಾಜ್ಯಾಧ್ಯಕ್ಷರ ಜೊತೆಯಲ್ಲಿ ಬಿಜೆಪಿಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರೂಣಕುಮಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್‌, ಕಲಬುರಗಿ ಸಂಸದ ಉಮೇಶ ಜಾದವ್‌, ಕಲಬುರಗಿ ವಿಭಾಗದ ಸಂಘಟನಾ ಪ್ರಾಭಾರಿ ರಾಜಕುಮಾರ ಪಾಟೀಲ್‌ ತೇಲ್ಕೂರ, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹಾಗೂ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)