ಸೋಮವಾರ, ನವೆಂಬರ್ 18, 2019
24 °C

ಸೌಕರ್ಯಗಳಿಲ್ಲದ ಕಾಲೇಜುಗಳ ಮಾನ್ಯತೆ ರದ್ಧತಿಗೆ ಆಗ್ರಹ

Published:
Updated:
Prajavani

ಶಿವಮೊಗ್ಗ: ಮೂಲ ಸೌಕರ್ಯ ಕಲ್ಪಿಸದ, ಕಿಷ್ಕಿಂಧೆಯಂತಹ ಜಾಗಗಳಲ್ಲಿ ಕಾಲೇಜು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಖಾಸಗಿ ಪಿಯು ಕಾಲೇಜುಗಳು ರಾಜ್ಯದ ಶಿಕ್ಷಣ ಕಾಯ್ದೆಯನ್ನೇ ಉಲ್ಲಂಘಿಸುತ್ತಿವೆ. ಹಲವರು ಮಳಿಗೆ, ಕಾಂಪ್ಲೆಕ್ಸ್, ವಸತಿ ಗೃಹದಲ್ಲಿ ಕಾಲೇಜು ನಡೆಸುತ್ತಿದ್ದಾರೆ. ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಜತೆ ಶಾಮೀಲಾಗಿ ಮೂಲ ಸೌಲಭ್ಯಗಳಿಲ್ಲದ ಕಾಲೇಜುಗಳಿಗೂ ಮಾನ್ಯನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

80ಕ್ಕೂ ಹೆಚ್ಚು ಕಾಲೇಜುಗಳು ಜಿಲ್ಲೆಯಲ್ಲಿವೆ. ಬಹುತೇಕ ಕಾಲೇಜುಗಳಲ್ಲಿ ಗ್ರಂಥಾಲಯ, ಲ್ಯಾಬ್‌ಗಳು ಇಲ್ಲ. ಬೋಧನಾ ಸಿಬ್ಬಂದಿ ಕೊರತೆ ಇದೆ. ಆಟದ ಮೈದಾನ, ಶೌಚಾಲಯಗಳೂ ಇಲ್ಲ. ಇಂತಹ ಕಾಲೇಜುಗಳಿಗೂ ಮಾನ್ಯತೆ ನೀಡಲಾಗಿದೆ. ಡೊನೇಷನ್ ಹಾವಳಿ ಮಿತಿಮೀರಿದೆ ಎಂದು ದೂರಿದರು.

ಇಂತಹ ಸಂಸ್ಥೆಗಳಿಗೆ ಬೀಗ ಹಾಕಬೇಕು. ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿದರು.

ವೇದಿಕೆಯ ಅಧ್ಯಕ್ಷ ಎಚ್.ಎಸ್.ಕಿರಣ್ ಕುಮಾರ್, ಮುಖಂಡರಾದ ಎಸ್.ಬಿ.ಶಿವಕುಮಾರ್, ಎಸ್.ಹೇಮಂತ್, ಇ.ನಾಗರಾಜ್, ನಾಗೇಂದ್ರ, ಕೃಷ್ಣಪ್ಪ, ಸೋಮಶೇಖರ್, ಜನಾರ್ಧನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)