ಬುಧವಾರ, ನವೆಂಬರ್ 20, 2019
21 °C

ಕರುವಿನ ಹೊಟ್ಟೆಯಲ್ಲಿ ಚಿನ್ನದ ಸರ ಪತ್ತೆ!

Published:
Updated:
Prajavani

ಸಾಗರ: ತಾಲ್ಲೂಕಿನ ನಂದಿತಳೆಯ ಕಾನ್ಮನೆ ಗ್ರಾಮದ ರವೀಂದ್ರ ಎಂಬುವವರ ಮನೆಯ ಕರುವಿನ ಹೊಟ್ಟೆಯಲ್ಲಿ ಶುಕ್ರವಾರ 20 ಗ್ರಾಂ ತೂಕದ ಚಿನ್ನದ ಸರ ಪತ್ತೆಯಾಗಿದೆ.

ದಸರಾ ಹಬ್ಬದ ಸಂದರ್ಭದಲ್ಲಿ ದೇವರ ಪೂಜೆ ಮಾಡುವಾಗ ವಿಗ್ರಹಕ್ಕೆ ಹೂವಿನ ಜತೆಗೆ ಚಿನ್ನದ ಸರವನ್ನು ತೊಡಿಸಲಾಗಿತ್ತು. ಹಬ್ಬ ಮುಗಿದ ನಂತರ ಹೂವನ್ನು ಸರದ ಸಮೇತ ಎಸೆಯಲಾಗಿತ್ತು. ಎಸೆದ ಹೂವನ್ನು ಚಿನ್ನದ ಸರದ ಸಮೇತ ಕರು ತಿಂದಿತ್ತು.

ಕರುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಪಶು ವೈದ್ಯ ಡಾ. ದಯಾನಂದ್ ಶಸ್ತ್ರಚಿಕಿತ್ಸೆ ನಡೆಸಿದಾಗ ಅದರ ಹೊಟ್ಟೆಯಲ್ಲಿ ಚಿನ್ನದ ಸರ ಪತ್ತೆಯಾಗಿದೆ. ಕರು ಈಗ ಆರೋಗ್ಯವಾಗಿದೆ.

ಪ್ರತಿಕ್ರಿಯಿಸಿ (+)