ಮಂಗಳವಾರ, ನವೆಂಬರ್ 19, 2019
27 °C

‘ತಜ್ಞರ ಕೊರತೆ: ಸೈಬರ್ ಅಪರಾಧ ತಡೆಗೆ ಹಿನ್ನಡೆ’

Published:
Updated:

ಕೆಂಗೇರಿ: ‘ದೇಶದಲ್ಲಿ ಪ್ರತಿದಿನ ಹತ್ತಾರು ಸೈಬರ್ ಅಪರಾಧಗಳು ದಾಖಲಾಗುತ್ತಿದೆ. ಕೋಟ್ಯಂತರ ರೂಪಾಯಿ ಹಣ ಕಣ್ಣಿಗೆ ಕಾಣದ ಪಾತಕಿಗಳ ಖಾತೆ ಸೇರುತ್ತಿದೆ. ದುರದೃಷ್ಟವಶಾತ್ ಇಂತಹ ಘೋರ ಅಪರಾಧವನ್ನು ತಡೆಯಲು ಬೇಕಾದ ನುರಿತ ಮಾನವ ಸಂಪನ್ಮೂಲವನ್ನು ದೇಶ ಹೊಂದಿಲ್ಲ’ ಎಂದು ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ಬನ್ನೂರ್ ಮಠ್ ಆತಂಕ ವ್ಯಕ್ತ ಪಡಿಸಿದರು.

ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 12ನೇ ರಾಷ್ಟ್ರೀಯ ಸೈಬರ್ ಡಿಫೆನ್ಸ್ ಶೃಂಗ
ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಂತ್ರಜ್ಞಾನ ಬೆಳೆದಂತೆ ಅಪರಾಧಗಳು ಹೊಸ ಆಯಾಮ ಪಡೆದುಕೊಂಡಿವೆ. ಇಂತಹ ಅಪರಾಧಗಳಿಂದ ದೇಶದ ಆರ್ಥಿಕತೆಯೊಂದಿಗೆ ವಿಶ್ವ ಸಾಮರಸ್ಯಕ್ಕೂ ಧಕ್ಕೆಯಾಗುತ್ತಿದೆ’ ಎಂದು ಬೇಸರ ವ್ಯಕ್ತ ಪಡಿಸಿದರು.

ಪತ್ತೆಯಾಗದ ಅಪರಾಧಿಯ ಚಹರೆ, ಅಂತರರಾಷ್ಟ್ರೀಯ ಸಂಬಂಧದ ಕೊರತೆ ಹಾಗೂ ಅಪರಾಧ ನಿಯಂತ್ರಣ ತಜ್ಞರ ಕೊರತೆಗಳು ಸೈಬರ್ ಅಪರಾಧ ತಡೆಗೆ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)