ಗುರುವಾರ , ನವೆಂಬರ್ 14, 2019
18 °C

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಂದ 21ರಂದು ಪಾದಯಾತ್ರೆ

Published:
Updated:

ಬೆಂಗಳೂರು: ‘ಕಾಂಗ್ರೆಸ್‌ನ 101 ಟಿಕೆಟ್‌ ಆಕಾಂಕ್ಷಿಗಳು ಇದೇ 21ರಂದು ಬೆಳಿಗ್ಗೆ 10 ಗಂಟೆಗೆ
ಕೆ.ಆರ್‌.ಪುರದ ಸಂತೆ ಮೈದಾನ ದಿಂದ ಕೆಪಿಸಿಸಿ ಕಚೇರಿವರೆಗೆ ಪಾದಯಾತ್ರೆ ಹೊರಟು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಅವರಿಗೆ ಅರ್ಜಿ ಸಲ್ಲಿಸಲಿದ್ದಾರೆ’ ಎಂದು ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಲೆ ಶ್ರೀನಿವಾಸ್‌ ತಿಳಿಸಿದರು.  

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಉಪಚುನಾವಣೆ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.  ನಾಯಕರಿಗೆ ಟಿಕೆಟ್‌ ನೀಡುವ ಬದಲು ಜನರ ಸಮಸ್ಯೆಗಳನ್ನು ಅರಿತ ನಮ್ಮಂಥ ಜನಸಾಮಾನ್ಯರಿಗೆ ಟಿಕೆಟ್ ನೀಡಬೇಕು’ ಎಂದರು. 

ಪ್ರತಿಕ್ರಿಯಿಸಿ (+)