ಬುಧವಾರ, ನವೆಂಬರ್ 20, 2019
22 °C

ಡಾ. ಸಿ.ಎನ್‌. ಮಂಜುನಾಥ್‌ಗೆವಿಶ್ವೇಶ್ವರಯ್ಯ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಮಾಹಿತಿ, ಜೈವಿಕ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ನೀಡುವ ಸರ್ ಎಂ.ವಿಶ್ವೇಶ್ವರಯ್ಯ, ರಾಜಾ ರಾಮಣ್ಣ, ಸರ್ ಸಿ.ವಿ.ರಾಮನ್ ಪ್ರಶಸ್ತಿಗೆ 2018ನೇ ಸಾಲಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದೆ.

ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ
ಡಾ.ಸಿ.ಎನ್.ಮಂಜುನಾಥ್, ಭಾರತೀಯ ವಿಜ್ಞಾನ ಸಂಸ್ಥೆ ಗೌರವ ಪ್ರಾಧ್ಯಾಪಕ ಎಸ್.ರಾಮಶೇಷ.

ಡಾ.ರಾಜಾ ರಾಮಣ್ಣ ವಿಜ್ಞಾನಿ ಪ್ರಶಸ್ತಿ: ಸೆಂಟರ್ ಫಾರ್ ನ್ಯಾನೊ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ನಿರ್ದೇಶಕ ಪ್ರೊ.ಜಿ.ಯು.ಕುಲಕರ್ಣಿ, ನಿಮ್ಹಾನ್ಸ್ ಪ್ರಾಧ್ಯಾಪಕಿ ಪ್ರತಿಮಾ ಮೂರ್ತಿ.

ಸರ್ ಸಿ.ವಿ.ರಾಮನ್ ಯುವ ವಿಜ್ಞಾನಿ ಪ್ರಶಸ್ತಿ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಪ್ರಾಧ್ಯಾಪಕಿ ಅನ್ನಪೂರ್ಣಿ, ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಹಪ್ರಾಧ್ಯಾಪಕಿ ರಂಜನಿ ವಿಶ್ವನಾಥ, ನಿಮ್ಹಾನ್ಸ್ ಪ್ರಾಧ್ಯಾಪಕ ಎಂ.ಎಂ.ಶ್ರೀನಿವಾಸ್ ಭರತ್, ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸ್ ಸಹ ಪ್ರಾಧ್ಯಾಪಕ ಪಡುಬಿದರಿ ವಿ.ಶಿವಪ್ರಸಾದ್.

ಸತೀಶ್ ಧವನ್ ಯುವ ಎಂಜಿನಿಯರ್ ಪ್ರಶಸ್ತಿ: ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಪ್ರಮೋದ್ ಕುಮಾರ್, ಸಂಸ್ಥೆ ಸಹಪ್ರಾಧ್ಯಾಪಕ ಶಯನ್ ಶ್ರೀನಿವಾಸ ಗರಣಿ, ಬಿಎಚ್‌ಇಎಲ್ ಹೆಚ್ಚುವರಿ ಜನರಲ್ ಮ್ಯಾನೇಜರ್ ಡಾ.ಸಿ.ಡಿ.ಮಧುಸೂದನ, ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಸಹಾಯಕ ತಾಂತ್ರಿಕ ನಿರ್ದೇಶಕ ಅಮಿತಾಭ್ ಸರಾಫ್.

ಕಲ್ಪನಾ ಚಾವ್ಲಾ ಮಹಿಳಾ ಯುವ ವಿಜ್ಞಾನಿ: ದಾವಣಗೆರೆ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ.

ವಿಶ್ವೇಶ್ವರಯ್ಯ ಪ್ರಶಸ್ತಿ ₹2 ಲಕ್ಷ, ರಾಜಾ ರಾಮಣ್ಣ ಪ್ರಶಸ್ತಿ ₹1.50 ಲಕ್ಷ ಹಾಗೂ ಉಳಿದ ಪ್ರಶಸ್ತಿಗಳಿಗೆ ₹1 ಲಕ್ಷ ನೀಡಲಾಗುತ್ತದೆ.

ಪ್ರತಿಕ್ರಿಯಿಸಿ (+)