ಬುಧವಾರ, ನವೆಂಬರ್ 20, 2019
21 °C

ಕಬಡ್ಡಿ ಮಣ್ಣಿನ ಆಟ: ಕೆ.ಎಸ್. ಸುಬ್ರಹ್ಮಣ್ಯ

Published:
Updated:
Prajavani

ಕೊಪ್ಪ: ಕಬಡ್ಡಿ ಮಣ್ಣಿನ ಆಟವಾಗಿದ್ದು, ಇದನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎಸ್. ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.

ಪಟ್ಟಣದ ಗಾಯತ್ರಿ ನಗರದಲ್ಲಿ ಭಾನುವಾರ ಜೆ.ಪಿ. ಬಾಯ್ಸ್ (ಜೆ.ಪಿ.ರಾಕರ್ಸ್) ವತಿಯಿಂದ ಹಮ್ಮಿಕೊಂಡ 13 ವರ್ಷದೊಳಗಿನ ಮಕ್ಕಳ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿದ ಅವರು, ಕ್ರೀಡಾಕೂಟ ಆಯೋಜನೆ ಮಾಡಿದ ಮಕ್ಕಳಿಗೆ ಸಲಹೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಓಣಿತೋಟ ರತ್ನಾಕರ್ ಮಾತನಾಡಿ, ‘ದೇಸೀಯ ಕ್ರೀಡೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ದೇಸಿ ಕ್ರೀಡೆಗೆ ಹೆಚ್ಚು ಒತ್ತುಕೊಡುವ ಮೂಲಕ ಕಬಡ್ಡಿ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಗಬೇಕು’ ಎಂದರು.

ಗ್ರಾಮಾಂತರ ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ಆರ್. ಸಂಜೀವ, ರಮ್ಲತ್, ಜೆ.ಪಿ. ರಾಕರ್ಸ್ನ ಅಧ್ಯಕ್ಷ ಕಾರ್ತಿಕ್, ಸ್ದಳೀಯರಾದ ಆಟೋ ಪಾಲಿ, ತೀರ್ಪುಗಾರ ಮಹೇಶ್ ಇದ್ದರು.

ಪ್ರತಿಕ್ರಿಯಿಸಿ (+)