ಮಂಗಳವಾರ, ನವೆಂಬರ್ 19, 2019
29 °C
‘ಸ್ಟೋನಿ ಬ್ರೂಕ್’ ರೆಸ್ಟೋರೆಂಟ್'

ಸುತ್ತ ನೀರು, ಕಾಡಿನ ಮಧ್ಯೆ ಊಟ- ಬೆಂಗಳೂರಿನಲ್ಲಿ ವಿಶಿಷ್ಟ ಶೈಲಿ ರೆಸ್ಟೋರೆಂಟ್

Published:
Updated:
Prajavani

ಕಾಡಿನ ನಡುವಿನಲ್ಲಿ ಅಪ್ಸರಾ ಕೊಂಡದಂಥ ಸುಂದರ ಜಲಪಾತ, ಜುಳು ಜುಳು ಹರಿಯುವ ನೀರು, ಹಕ್ಕಿಗಳ ಚಿಲಿಪಿಲಿ...ಆಹಾ!! ಮಲೆನಾಡ ನೆನಪಸಿವ ಜಾಗ ಬೆಂಗಳೂರಿನಲ್ಲಿ ಸಿಗುವಂತಿದ್ದರೆ! ನೀರಿನಲ್ಲಿ ಕಾಲು ಇಳಿಬಿಟ್ಟು ಕೂತ ನಮಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಬಡಿಸುವ ವ್ಯವಸ್ಥೆಯಿದ್ದಿದ್ದರೆ..!

ಅಂಥ ಸುಂದರ ಕನಸಿಗೊಂದು ಸ್ಪಷ್ಟ ರೂಪವೆಂಬಂತೆ ರಾಜರಾಜೇಶ್ವರಿ ಬಡಾವಣೆಯ ಜೆ.ಎಸ್.ಎಸ್ ಕಾಲೇಜಿನ ಮುಂಭಾಗದಲ್ಲಿ ದೇಶದಲ್ಲೇ ಪ್ರಪ್ರಥಮ ಸ್ಟ್ರೀಮ್ ರೆಸ್ಟೋರೆಂಟ್ ಒಂದಿದೆ. ಅದುವೇ ‘ಸ್ಟೋನಿ ಬ್ರೂಕ್’!

ಫಿಲಿಪ್ಪೀನ್ಸ್‌ನಲ್ಲಿರುವ ವಾಟರ್ ಫಾಲ್ ರೆಸ್ಟೋರೆಂಟ್‌ನಿಂದ ಪ್ರಭಾವಿತ ‘ಸ್ಟೋನಿ ಬ್ರೂಕ್’ನಲ್ಲಿ ವಿಶಾಲವಾದ ಕಾರ್ ಪಾರ್ಕಿಂಗ್‌ ಇದೆ. ಮರದ ದಿಮ್ಮಿಗಳ ದೊಡ್ಡ ಮುಖ್ಯದ್ವಾರ ಪಕ್ಕದಲ್ಲೇ ಹಾಲಿವುಡ್ ನೆನಪಿಸುವ ದೊಡ್ಡ ಬ್ಲಾಕ್ ಅಂಡ್ ವೈಟ್ ಪೋಸ್ಟರ್! ಅಲ್ಲಿಂದಲೇ ನಮ್ಮ ಸೆಲ್ಫಿ ಸೆಷನ್ ಸ್ಟಾರ್ಟ್‌ ಆಯ್ತು. ಪಾದರಕ್ಷೆಗಳನ್ನು ಕಳಚಿಟ್ಟು, ನ್ಯಾಚುರಲ್ ಸ್ಟೋನ್ ಮೇಲೆ ಕಾಲಿಡುತ್ತಿದಂತೆ ಎಲ್ಲಿ ಜಾರಿ ಬಿಡುತ್ತೇವೋ ಎನ್ನುವ ಭಯದಿಂದ ಮೆಲ್ಲ ಹೆಜ್ಜೆ ಇಡುತ್ತಿದ್ದಂತೆ ಕಲ್ಲುಗಳು ಆಂಟಿಸ್ಕಿಡ್ ಎನ್ನುವುದು ಅರಿವಿಗೆ ಬರುತ್ತದೆ.

ಕಣ್ಮನ ಸೆಳೆಯುವ ಬೆಳಕು, ಎಡ ಭಾಗದಲ್ಲಿ ಸುಂದರ ಜಲಪಾತ. ಆ ಜಲಪಾತದಲ್ಲಿ ಇಳಿದರೆ ಪಾದಕ್ಕೆ ಹಿತವೆನಿಸುವ ನೀರು. ಊಟಕ್ಕೆ ಬಂದಿದ್ದು ಮರೆತೇ ಹೋಗುವಂತೆ ಆ ನಿರ್ಮಿತ ಕಾಡಿನ ಪರಿಸರ ಮೈಮರೆಸುತ್ತದೆ. ಮುಂದೆ ವೈನ್ ಮಾತ್ರ ಸಿಗುವ ಬಾರ್ ಲಾಂಜ್, ಬಲಕ್ಕೆ ಡೈನ್ನಿಂಗ್ ಏರಿಯಾ. ಆಸನಗಳು ಕೂಡ ನೈಸರ್ಗಿಕ ಮರದ ದಿಮ್ಮಿಯಿಂದ ಮಾಡಲ್ಪಟ್ಟಿದ್ದು. ಕಾಡು ಮತ್ತು ನೀರಿನ ಪರಿಸರಕ್ಕೆ ಸಾಥ್ ಕೊಡುವಂತಿವೆ. ಇಲ್ಲಿ ಬಳಸುವ ಮಗ್, ಸ್ಟ್ರಾ ಎಲ್ಲವನ್ನೂ ಪ್ಲಾಸ್ಟಿಕ್ ಬಳಸದೆ ಬಿದಿರು ಮತ್ತಿತರ ನೈಸರ್ಗಿಕ ವಸ್ತುಗಳಿಂದ ಮಾಡಿರುವಂತವಾಗಿವೆ. ಮೇಲೆ ವಿಂಟೇಜ್ ವಾಹನಗಳಲ್ಲಿ ಕೂರಲು ವ್ಯವಸ್ಥೆಯಿದೆ. ಅಂಡರ್‌ಗ್ರೌಂಡ್‌ ಸೀಟಿಂಗ್ ಇದೆ.

 

ಇದು ಮಲ್ಟಿ ಕ್ಯುಸಿನ್ ರೆಸ್ಟೋರೆಂಟ್. ಚೈನೀಸ್, ಥಾಯ್, ಇಂಡೋನೇಷ್ಯ, ಇಟಾಲಿಯನ್ ಮತ್ತು ಜಪಾನೀ ಖಾದ್ಯಗಳನ್ನು ಸವಿಯಬಹುದು. ಆಹಾರದ ರುಚಿಯೂ ನಿರಾಸೆಗೊಳಿಸುವುದಿಲ್ಲ.

ಇದನ್ನೂ ಓದಿ: ಬೆಂಗಳೂರಿನ ಹೋಟೆಲ್ ದರ್ಶನ

ಪರಿಸರ ಸ್ನೇಹಿ ಮಾಲೀಕರು ಗ್ರಾಹಕರಿಗೆಲ್ಲ ಬೀಳ್ಕೊಡುವಾಗ ಸಸಿ ಉಡುಗೊರೆಯಾಗಿ ಕೊಡುವುದನ್ನು ಇದೇ ಮೊದಲ ಬಾರಿ ಕಂಡಿದ್ದು. ಇಲ್ಲಿ ಬಳಸುವ 12 ಸಾವಿರ ಲೀಟರ್ ನೀರು ವೇಸ್ಟ್ ಆಗದೆ ಮರು ಬಳಕೆಯಾಗುವುದು. ಬೆಂಗಳೂರಿನ ಯಾಂತ್ರಿಕ ಜೀವನಕ್ಕೆ ಬೇಸತ್ತ ಜನರಿಗೆ ವಿಭಿನ್ನ ಅನುಭವಕ್ಕೆ ಎಡೆಮಾಡುವುದಂತೂ ನಿಜ. ಹಾಗಾಗಿ ಕುಟುಂಬ ಸಮೇತರಾಗಿ ಒಮ್ಮೆ ಭೇಟಿ ಕೊಡಲು ಸೂಕ್ತ ಸ್ಥಳ ‘ಸ್ಟೋನಿ ಬ್ರೂಕ್’ ಸ್ಟ್ರೀಂ ರೆಸ್ಟೋರೆಂಟ್.

ಚಿತ್ರ ಲೇಖನ: ಗಾಯತ್ರಿ ರಾಜ್

ಪ್ರತಿಕ್ರಿಯಿಸಿ (+)