ಭಾನುವಾರ, ಅಕ್ಟೋಬರ್ 20, 2019
21 °C

ನಾಳೆಯಿಂದ ಸಿದ್ಧರಾಮೇಶ್ವರರ ಜಾತ್ರೆ

Published:
Updated:

ಗುಲ್ಬರ್ಗ:  ಮಹಾರಾಷ್ಟ್ರದ ಸೋಲಾಪುರ ಸಿದ್ಧರಾಮೇಶ್ವರರ ಜಾತ್ರಾ ಮಹೋತ್ಸವ ಜ. 14ರಿಂದ 17ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.14ರಂದು ಅಲ್ಲಿನ ಹಿರೇಹಬ್ಬು ಅವರ ಮನೆಯಿಂದ ಹೊರಟ ನಂದಿಧ್ವಜಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಂದಿರ ತಲುಪುವುದು. ನಂತರ ಅಕ್ಷತೆ ಕಾರ್ಯಕ್ರಮ ಜರುಗಲಿದೆ.15ರಂದು ಮಕರ ಸಂಕ್ರಮಣದ ನಿಮಿತ್ತವಾಗಿ ದೇವಸ್ಥಾನದ ಆವರಣದಲ್ಲಿ ಹೋಮ-ಹವನ ಕಾರ್ಯಕ್ರಮ, 16ರಂದು ರಾತ್ರಿ ಮದ್ದು ಸುಡುವ ಕಾರ್ಯಕ್ರಮ, 17ರಂದು ಕಪ್ಪಡಕಳಿ, ನಂದಿಧ್ವಜಗಳ ವಸ್ತ್ರ ವಿಸರ್ಜನೆ ಮಾಡುವ ಮೂಲಕ ಜಾತ್ರಗೆ ತೆರೆ ಬೀಳಲಿದೆ.ಮಹಾರಾಷ್ಟ್ರ ಸೇರಿದತೆ ಕರ್ನಾಟಕ, ಆಂಧ್ರಪ್ರದೇಶದ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಪಂಚ ಕಮೀಟಿಯ ಸುಭಾಷ ಮುನಾಳೆ ತಿಳಿಸಿದ್ದಾರೆ.

Post Comments (+)