ಶುಕ್ರವಾರ, ಅಕ್ಟೋಬರ್ 18, 2019
27 °C

ವರದಕ್ಷಿಣೆ:ಯುವತಿ ಬಲಿ

Published:
Updated:

ಗುಲ್ಬರ್ಗ: ಮದುವೆಯಾದ ಆರು ತಿಂಗಳಲ್ಲೇ ವರದಕ್ಷಿಣೆ ದೌರ್ಜನ್ಯಕ್ಕೆ ಯುವತಿಯೊಬ್ಬಳು ಜೀವ ಕಳೆದುಕೊಂಡ ಘಟನೆ ನಗರದ ದುಬೈ ಕಾಲೊನಿಯಲ್ಲಿ ನಡೆದಿದೆ.ಬಸಮ್ಮಾ (20) ವರದಕ್ಷಿಣೆ ಕಿರುಕುಳಕ್ಕೆ ತುತ್ತಾದ ಯುವತಿ. ಭಾಲ್ಕಿ ತಾಲ್ಲೂಕಿನ ಕದಲಾಬಾದ ಗ್ರಾಮದ ಬಸಮ್ಮಾ ಅವರನ್ನು ದುಬೈ ಕಾಲೋನಿಯ ಬಸವರಾಜನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ 4 ತೊಲೆ ಬಂಗಾರ ನೀಡಲಾಗಿತ್ತು ಎನ್ನಲಾಗಿದೆ.ಮತ್ತಷ್ಟು ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸಿದ ಗಂಡ ಹಾಗೂ ಆತನ ಮನೆಯವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಸುಟ್ಟ ಗಂಭೀರಗಾಯಗೊಂಡ ಬಸಮ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಬದುಕುಳಿಯಲಿಲ್ಲ ಎನ್ನಲಾಗಿದೆ. ತವರು ಮನೆಯವರು ಚೌಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

Post Comments (+)