ಸೋಮವಾರ, ಜನವರಿ 20, 2020
20 °C

ನಂದಿಕೂರ:ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತಾಲ್ಲೂಕಿನ ಪಾಣೆಗಾಂವ ಗ್ರಾಮಕ್ಕೆ ಸೇರುವ ಮಾರ್ಗ ಮಧ್ಯದಲ್ಲಿ ಬರುವ ರಸ್ತೆಯಲ್ಲಿ  ಸೇತುವೆಯೊಂದು ರಸ್ತೆಗಿಂತ ತೀರಾ ಕೆಳಮಟ್ಟದಲ್ಲಿ ಇರುವುದರಿಂದ ಆಗಾಗ ರಸ್ತೆ ಮೇಲೆ ನೀರು ಹರಿದು ರಸ್ತೆ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದೆ. ಕೂಡಲೇ ಸೇತುವೆ ಎತ್ತರಿಸಬೇಕು ಎಂದು ಆಗ್ರಹಿಸಿ ನಂದಿಕೂರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪವನಕುಮಾರ ವಳಕೇರಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಪಾಣೆಗಾಂವನಿಂದ ಕಡಣಿ ಗ್ರಾಮದವರೆಗೆ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಮೂರು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಪವನಕುಮಾರ ವಳಕೇರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶರಣಪ್ಪ ಚಿನಮಳ್ಳಿ, ಹರಿಶ್ಚಂದ್ರ ದೇಸು ಪವಾರ, ವನಿತಾ ಎಸ್. ಪೂಜಾರಿ, ಗ್ರಾಮದ ಮುಖಂಡರಾದ ಮಾಳಪ್ಪ ಪೂಜಾರಿ, ರೇವಣಸಿದ್ದಪ್ಪ ಎಸ್. ಚಿನಮಳ್ಳಿ, ನಾಗಪ್ಪ ಎಂ. ಹೊಳಕುಂದಿ, ಬಸವಲಿಂಗಪ್ಪ ಬಿ. ಪಾಟೀಲ ಪಾಲ್ಗೊಂಡಿದ್ದರು

 

ಪ್ರತಿಕ್ರಿಯಿಸಿ (+)